ಶೂಟ್ ಮಾಡಿಕೊಂಡು ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ರಾಯ್ ಆತ್ಮಹತ್ಯೆ

ಬೆಂಗಳೂರು : ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಡಾ. ಸಿ.ಜೆ ರಾಯ್ ಸ್ವತಃ ತಾವೇ ಗುಂಡು ಹಾರಿಸಿಕೊಂಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ.

ತನಿಖೆಯ ಪ್ರಕಾರ, ಸಿ.ಜೆ ರಾಯ್ ಅವರು ತಮ್ಮ ಬಲಗೈಯಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡು ಎದೆಯ ಎಡಭಾಗದ ಮೂಲಕ ದೇಹವನ್ನು ಪ್ರವೇಶಿಸಿ, ಬೆನ್ನಿನ ಭಾಗದಲ್ಲಿ ಸಿಲುಕಿಕೊಂಡಿದೆ. ಒಂದು ಸುತ್ತು ಗುಂಡು ಹಾರಿಸಿಕೊಂಡು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗನ್ ಅನ್ನು ಎದೆಯ ಮೇಲಿಟ್ಟು ಅತ್ಯಂತ ಸಮೀಪದಿಂದ ಗುಂಡು ಹಾರಿಸಿಕೊಂಡಿರುವುದು ಪತ್ತೆಯಾಗಿದೆ. ಈ ಕಾರಣದಿಂದ ಎದೆಯ ಮೇಲ್ಭಾಗದ ಮಾಂಸಖಂಡಗಳು ಚದುರಿಲ್ಲ, ಬದಲಾಗಿ ಗುಂಡು ನೇರವಾಗಿ ದೇಹದೊಳಗೆ ಆಳವಾಗಿ ಇಳಿದಿದೆ. ಈ ವೇಳೆ ಎದೆ ಛಿದ್ರವಾಗಿ ಗುಂಡು ಬೆನ್ನಿನಲ್ಲಿ ಸಿಲುಕಿಕೊಂಡಿರುವುದಾಗಿ ವರದಿಯಾಗಿದೆ.

ಪಾಕೆಟ್ ಗನ್‌ನಿಂದ ಶೂಟ್ ಮಾಡಿಕೊಂಡಿದ್ದು, ಬುಲೆಟ್ ದೇಹದ ಒಳನುಗ್ಗಿದೆ. ಹೃದಯ ಹೊಕ್ಕು, ಶ್ವಾಸಕೋಶ, ರಕ್ತನಾಳಕ್ಕೆ ಹೋಗಿ ಕೊನೆಗೆ 11ನೇ ಪಕ್ಕೆಲುಬಿಗೆ ತಲುಪಿದೆ. ಕೊನೆಗೆ ಅಲ್ಲಿಯೇ ಟರ್ನ್ ಆಗಿ ಎದೆಯಲ್ಲಿ ಸಿಲುಕಿದೆ. ಮರಣೋತ್ತರ ಪರೀಕ್ಷೆಯಲ್ಲಿ ಬುಲೆಟ್‌ನ್ನು ಹೊರತೆಗೆದು, ಎಫ್‌ಎಸ್‌ಎಲ್‌ಗೆ ರವಾನಿಸಿದ್ದಾರೆ. ಬುಲೆಟ್‌ಗೆ ಯಾವುದೇ ಸ್ಕ್ರ‍್ಯಾಚ್ ಆಗದಂತೆ ಕಾರ್ಬನ್‌ನಲ್ಲಿ ಸುತ್ತಿ ರವಾನೆ ಮಾಡಲಾಗಿದೆ.

ಆತ್ಮಹತ್ಯೆಗೆ ಬಳಸಿದ NP bore 0.25 ಪಿಸ್ತೂಲ್ ಸಿಜೆ ರಾಯ್ ಹೆಸರಿನಲ್ಲಿ ಪರವಾನಗಿ ಪಡೆಯಲಾಗಿತ್ತು ಎಂಬುದು ಖಚಿತವಾಗಿದೆ. ಸದ್ಯ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ವಿಧಿವಿಜ್ಞಾನ ಪರೀಕ್ಷೆಗಾಗಿ (FSL) ಕಳುಹಿಸಲಾಗಿದೆ.

































































































































































error: Content is protected !!
Scroll to Top