ಜ. 25 : ರಾಮಕ್ಷತ್ರೀಯ ಸಂಘ – ಶ್ರೀ ರಾಮ ಚಾರಿಟೇಬಲ್‌ ಟ್ರಸ್ಟ್‌ ಕಾರ್ಕಳ : ವಾರ್ಷಿಕೋತ್ಸವ

ಕಾರ್ಕಳ : ರಾಮಕ್ಷತ್ರೀಯ ಸಂಘ ಹಾಗೂ ಶ್ರೀ ರಾಮ ಚಾರಿಟೇಬಲ್‌ ಟ್ರಸ್ಟ್‌ ರಿ. ಕಾರ್ಕಳ ಇದರ ವಾರ್ಷೀಕೋತ್ಸವ ಸಮಾರಂಭ ಜ. 25ರಂದು ಬಂಡಿಮಠದ ಶ್ರೀ ರಾಮ ಸಭಾಭವನದಲ್ಲಿ ನಡೆಯಲಿದೆ.

ಮಧ್ಯಾಹ್ನ 2 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಗುರುಪ್ರಸಾದ್‌ ರಾವ್‌ ಅಜೆಕಾರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬೈ ಹೆಚ್‌ಡಿಎಫ್‌ಸಿ ಲಿ. ಇದರ ನಿವೃತ್ತ ಜನರಲ್‌ ಮ್ಯಾನೇಜರ್‌ ರಾಜ್‌ ಕುಮಾರ್‌ ಕಾರ್ನಾಡ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀರಾಮ ಕ್ರೆಡಿಟ್‌ ಕೋ. ಆ. ಸೊಸೈಟಿಯ ಅಧ್ಯಕ್ಷ ಕೆ. ನಾಗರಾಜ್‌ ರಾವ್‌ ಕಾಮಧೇನು, ಸುರತ್ಕಲ್‌ ಪೊಲೀಸ್‌ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಪ್ರಮೋದ್‌ ಕುಮಾರ್‌ ಪಿ., ಮಂಗಳೂರು ಪೊಲೀಸ್‌ ಠಾಣೆಯ ಎ.ಎಸ್.‌ಐ. ಸಂತೋಷ್ ಪಡೀಲ್‌, ಕಾರ್ಮಿಕ ರಾಜ್ಯ ವಿಮಾ ವೈದ್ಯಕೀಯ ಇಲಾಖೆ ಉಡುಪಿ ಪ್ರಥಮ ದರ್ಜೆ ಸಹಾಯಕ ವಿಶ್ವಾಸ್ ಕುಮಾರ್‌, ಕಾರ್ಕಳ ರಾಮಕ್ಷತ್ರೀಯ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಸುಕೇಶ್‌ ಎನ್‌. ರಾವ್‌ ಬೈಲೂರು, ಗೌರವಾಧ್ಯಕ್ಷ ಪ್ರಸನ್ನ ಕೆ.ಬಿ. ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಹಡೀಲು ಭೂಮಿ ಕೃಷಿಕ ವೆಂಕಟೇಶ್‌ ಕೌಡೂರು ಹಾಗೂ ಸಮಾಜ ಸೇವಕ ದಿವಾಕರ ಎಮ್‌. ಮುಡಾರು ಅವರನ್ನು ಸನ್ಮಾನಿಸಲಾಗುವುದು.

ಸಮಾರೋಪ
ಸಂಜೆ 5 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಗುರುಪ್ರಸಾದ್‌ ರಾವ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್‌, ಪಣಂಬೂರು ಉತ್ತರ ವಿಭಾಗದ ಎ.ಸಿ.ಪಿ. ಶ್ರೀಕಾಂತ್‌ ಕೆ., ಉಡುಪಿ ರಾಮಕ್ಷತ್ರೀಯ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್‌ ಗುರ್ಮೆ, ಜೆ. ಇ. ಹೆಲ್ತ್‌ಕೇರ್‌ ಸೀನಿಯರ್‌ ಡೈರೆಕ್ಟರ್‌ ಶಿವಕುಮಾರ್‌ ಹೊಸಂಗಡಿ, ಉದ್ಯಮಿ ರಮೇಶ್‌ ರಾವ್‌, ಕುಕ್ಕುಂದೂರು ಗ್ರಾ. ಪಂ. ಮಾಜಿ ಅಧ್ಯಕ್ಷೆ ಸುಮನಾ ಮಾಧವ ರಾವ್‌, ರಾಮಕ್ಷತ್ರೀಯ ಸಂಘ ಹಾಗೂ ಶ್ರೀರಾಮ ಚಾರಿಟೇಬಲ್‌ ಟ್ರಸ್ಟ್‌ ಗೌರವಾಧ್ಯಕ್ಷ ಪಾರ್ಥಸಾರಥಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದಲ್ಲಿ ಸಮಾಜದ ರಿಕ್ಷಾ ಚಾಲಕ ಮಾಲಕರಿಗೆ ಸನ್ಮಾನ ಹಾಗೂ ವಿಕಲಚೇತನರಿಗೆ ಸಹಾಯಧನ ವಿತರಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ಜರುಗಲಿದೆ.







































































































error: Content is protected !!
Scroll to Top