ನಂದಳಿಕೆ-ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ವತಿಯಿಂದ ವರಕವಿ ಮುದ್ದಣ 156ನೇ ಜನ್ಮದಿನ ಆಚರಣೆ

ಕಾರ್ಕಳ : ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ರಜತ ಮಹೋತ್ಸವ ಸಭಾಂಗಣದಲ್ಲಿ ಜ. 24ರಂದು ನಂದಳಿಕೆ ವರಕವಿ ಮುದ್ದಣನ 156ನೇ ವರ್ಷದ ಜನ್ಮ ದಿನಾಚರಣೆ ಆಚರಿಸಲಾಯಿತು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ಸುರೇಶ ಅಬ್ಬನಡ್ಕ ಅವರು ಮುದ್ದಣನ ಭಾವಚಿತ್ರಕ್ಕೆ ಪುಷ್ಟಾರ್ಚನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ನಂದಳಿಕೆಯ ಪುಣ್ಯ ಮಣ್ಣಿನಲ್ಲಿ ಜನಿಸಿದ ಮುದ್ದಣ (ಲಕ್ಷ್ಮೀನಾರಾಯಣಪ್ಪ) ನಂದಳಿಕೆಯ ಹೆಸರನ್ನು ರಾಷ್ಟ್ರ ಮಟ್ಟದಲ್ಲಿ ಬೆಳಗುವಂತೆ ಮಾಡಿದ ಮಹಾನ್ ಸಾಧಕ. ಅವರು 32 ವರ್ಷ ಮಾತ್ರ ಬದುಕಿದರೂ, ಜೀವನವಿಡೀ ಕಹಿಯುಂಡರೂ, ಸಾರಸ್ವತ ಲೋಕಕ್ಕೆ ಮಹಾನ್ ಕೃತಿಗಳನ್ನು ನೀಡಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಶ್ರೀ ರಾಮಾಶ್ವಮೇಧ, ಶ್ರೀ ರಾಮ ಪಟ್ಟಾಭಿಷೇಕ, ಅದ್ಭುತ ರಾಮಾಯಣ, ಮಹಾಕಾವ್ಯಗಳು, ರತ್ನಾವತಿ ಕಲ್ಯಾಣ, ಕುಮಾರ ವಿಜಯ ಯಕ್ಷಗಾನ ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ಸಲ್ಲಿಸಿದರಾಗಿದ್ದಾರೆ ಎಂದರು. ಫ್ರೆಂಡ್ಸ್‌ ಕ್ಲಬ್‌ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







































































































error: Content is protected !!
Scroll to Top