ಅಧ್ಯಕ್ಷರಾಗಿ ನಳಿನಿ ಎಸ್. ಸುವರ್ಣ – ಕಾರ್ಯದರ್ಶಿಯಾಗಿ ರಂಜಿತ್ ಶಿರ್ಲಾಲು
ಕಾರ್ಕಳ : ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಕಾರ್ಕಳ ಘಟಕದ ನೂತನ ಅಧ್ಯಕ್ಷರಾಗಿ ನ್ಯೂಸ್ ಕಾರ್ಕಳದ ನಳಿನಿ ಎಸ್. ಸುವರ್ಣ ಆಯ್ಕೆಯಾಗಿದ್ದಾರೆ. ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳನ್ನೊಳಗೊಂಡ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆದಿದ್ದು, ಕಾರ್ಯದರ್ಶಿಯಾಗಿ ಮಾಧ್ಯಮ ಬಿಂಬದ ರಂಜಿತ್ ಶಿರ್ಲಾಲು, ಗೌರವಾಧ್ಯಕ್ಷರಾಗಿ ಎನ್‌ಪಿ ನ್ಯೂಸ್‌ನ ವಾಸುದೇವ ಭಟ್, ಕರಾವಳಿ ನಾಡಿಯ ಬಾಲಕೃಷ್ಣ ಭೀಮಗುಳಿ, ಸಂಚಾಲಕರಾಗಿ ಮಾಧ್ಯಮ ಬಿಂಬದ ಶರತ್ ಭಟ್, ಉಪಾಧ್ಯಕ್ಷರಾಗಿ ಸ್ವಯಂ ಟೈಮ್ಸ್‌ನ ಪ್ರಮೋದ್ ಪೈ ಮುನಿಯಾಲು, ಇಮ್ತಿಯಾಜ್ ಕಾರ್ಕಳ, ಕೋಶಾಧಿಕಾರಿಯಾಗಿ ನಮ್ಮ ಕಾರ್ಲದ ಮಂಜೇಶ್ ಶೆಟ್ಟಿ ಹಾಗೂ ಸ್ವಯಂ ಟೈಮ್ಸ್‌ನ ಶಶಿಕಾಂತ್, ಸಂಘಟನಾ ಕಾರ್ಯದರ್ಶಿಯಾಗಿ ನಮ್ಮ ಕಾರ್ಲದ ಸಂಪತ್, ನ್ಯೂಸ್ ಕಾರ್ಕಳದ ಶರತ್, ಗೌರವ ಸಲಹೆಗಾರರಾಗಿ ರಾಧಿಕಾ, ಅಬೂಬಕರ್ ಹಾಗೂ ಅವಿಲ್ (ನಮ್ಮ ಕಾರ್ಲ), ಸಚಿನ್ ಹಾಗೂ ಅಶ್ವಿನಿ ನಂದಳಿಕೆ (ಕರಾವಳಿ ನಾಡಿ), ಹರಿಪ್ರಸಾದ್ (ಎನ್‌ಪಿ ನ್ಯೂಸ್) ಅವರು ಆಯ್ಕೆಯಾಗಿದ್ದಾರೆ. ಸೀತಾರಾಮ (ತುಳುನಾಡ ವಾರ್ತೆ), ಸೌಮ್ಯ, ನಿಶ್ಮಿತಾ ಶೆಟ್ಟಿ (ಎನ್‌ಪಿ ನ್ಯೂಸ್) ಸದಸ್ಯರಾಗಿದ್ದಾರೆ.
ರಾಜ್ಯದಾದ್ಯಂತ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಬಲವರ್ಧನೆ ಆಗುತ್ತಿದ್ದು ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ರಾಜ್ಯ ಅಧ್ಯಕ್ಷರಾದ ಜಿ.ಎಂ. ರಾಜಶೇಖರ್, ರಾಜ್ಯ ಕಾರ್ಯದರ್ಶಿ ವಸಂತ್ ಕುಮಾರ್ ತಿಳಿಸಿದ್ದಾರೆ.

























