ಉಡುಪಿ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ನಾರಾಯಣ ಗುರು ವಸತಿ ಶಾಲೆಗಳಲ್ಲಿ 2026-27ನೇ ಸಾಲಿಗೆ 6ನೇ ತರಗತಿ ದಾಖಲಾತಿಗೆ ಅರ್ಜಿ ಗಳನ್ನು ಆಹ್ವಾನಿಸಲಾಗಿದೆ.
ಜನವರಿ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅವರು ತಮ್ಮ ಸಮೀಪದ ವಸತಿ ಶಾಲೆಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
ಸಂಪರ್ಕ ಸಂಖ್ಯೆ
ಹೆಚ್ಚಿನ ಮಾಹಿತಿಗಾಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರೂರು ಬ್ರಹ್ಮಾವರ ದೂ.ಸಂಖ್ಯೆ: 9482625925, ಕಾಪು ತಾಲೂಕಿನ ಕಳತ್ತೂರು ದೂ.ಸಂಖ್ಯೆ: 9535225409, ಪಟ್ಲ ಹಿರೇಬೆಟ್ಟು ದೂ.ಸಂಖ್ಯೆ: 8970292710, ಹೆರಂಜಾಲು ದೂ.ಸಂಖ್ಯೆ: 8073860074, ಕಾರ್ಕಳ ಮಿಯ್ಯಾರು ದೂ.ಸಂಖ್ಯೆ: 9739790298 ಹಾಗೂ ಯಡ್ಯಾಡಿ-ಮತ್ಯಾಡಿ ದೂ.ಸಂಖ್ಯೆ: 9901519126.
ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ ಶಂಕರನಾರಾಯಣ ದೂ.ಸಂಖ್ಯೆ: 6363120177 ಹಾಗೂ ಅಜೆಕಾರು ದೂ.ಸಂಖ್ಯೆ: 7204909862. ಇಂದಿರಾಗಾಂಧಿ ವಸತಿ ಶಾಲೆ ಸಿದ್ದಾಪುರ ದೂ.ಸಂಖ್ಯೆ: 9482487266 ಹಾಗೂ ನಾರಾಯಣಗುರು ವಸತಿ ಶಾಲೆ ವಡ್ಡರ್ಸೆ ದೂ.ಸಂಖ್ಯೆ: 8867415291 ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
























