ರಸ್ತೆ ಬದಿ ನಿಂತಿದ್ದ ಮಕ್ಕಳಿಗೆ ಟೆಂಪೋ ಡಿಕ್ಕಿ

ಕಾರ್ಕಳ : ರಸ್ತೆ ಬದಿ ನಿಂತಿದ್ದ ಮಕ್ಕಳಿಗೆ ಟೆಂಪೋ ಡಿಕ್ಕಿಯಾದ ಘಟನೆ ಜ. 20ರಂದು ಅಜೆಕಾರಿನಲ್ಲಿ ನಡೆದಿದೆ. ಕಾರ್ಕಳದಿಂದ ಅಜೆಕಾರಿನೆಡೆಗೆ ಸಾಗುತ್ತಿದ್ದ ಕೆಎ20ಡಿ1844 ಟೆಂಪೋ ಅಜೆಕಾರು ಮಸೀದಿ ಬಳಿ ರಸ್ತೆಯ ತೀರಾ ಎಡಕ್ಕೆ ಬಂದು ರಸ್ತೆ ಬದಿ ನಿಂತುಕೊಂಡಿದ್ದ ಮಸೀದಿಯ ಮದರಸಕ್ಕೆ ಕಲಿಯಲು ಬಂದ ಮಕ್ಕಳಾದ ಫಾತಿಮತ್ ಸಮ್ರೀನ (6) ಮತ್ತು ಫಾತಿಮತ್ ಸನ (10)ರವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಇಬ್ಬರು ಮಕ್ಕಳೂ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಾರ್ಕಳ ಟಿ.ಎಂ.ಎ.ಪೈ ದಾಖಲು ಮಾಡಲಾಗಿತ್ತು. ಫಾತಿಮತ್ ಸಮ್ರೀನಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

















































error: Content is protected !!
Scroll to Top