ಇಂದು ಕುಂದೇಶ್ವರ ಉತ್ಸವ – ನಾಳೆ ಕುಂದೇಶ್ವರ ಪ್ರಶಸ್ತಿ ಪ್ರದಾನ

ಕಾರ್ಕಳ : ಹಿರ್ಗಾನ ಶ್ರೀ ಕುಂದೇಶ್ವರ ಕ್ಷೇತ್ರದ ವರ್ಷಾವಧಿ ಜಾತ್ರೆ ಜ. 22 – 23ರಂದು ನಡೆಯಲಿದೆ.
ಜ. 22ರಂದು ಧ್ವಜಾರೋಹಣ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ರಂಗ ಪೂಜೆ, ಸುತ್ತು ಬಲಿ, ನೇಮೋತ್ಸವ ನಡೆಯಲಿದೆ. ಜ.23ರಂದು ರಾತ್ರಿ7 ಗಂಟೆಯಿಂದ ಕದ್ರಿ ಮಹಿಳಾ ಯಕ್ಷಕೂಟದವರಿಂದ ಮಹಿಳಾ ಯಕ್ಷಗಾನ, ನಮ್ಮ ಬೆದ್ರ ತಂಡದವರಿಂದ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಇದೇ ಸಂದರ್ಭ ಪ್ರಸಿದ್ಧ ಯಕ್ಷಗಾನ ಭಾಗವತರಾದ ಕಾವ್ಯಶ್ರೀ ಅಜೇರು ಅವರಿಗೆ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಹಾಗೂ ರಂಗಭೂಮಿ ಕಲಾವಿದ ಉಮೇಶ್ ಮಿಜಾರು ಅವರಿಗೆ ಕುಂದೇಶ್ವರ ಕಲಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಸಮಾರಂಭದಲ್ಲಿ ಶಾಸಕ ವಿ. ಸುನಿಲ್ ಕುಮಾರ್, ಶ್ರೀ ನಾರಾಯಣಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ, ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ಎಸ್‌ಕೆಎಸ್‌ ಇನ್ಫ್ರಾ ವ್ಯವಸ್ಥಾಪಕ ನಿರ್ದೇಶಕ ಸುಜಯ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಉದಯ ಶೆಟ್ಟಿ ಮುನಿಯಾಲು, ಬಿಜೆಪಿ ಮುಖಂಡರಾದ ನವೀನ್ ನಾಯಕ್ ನಿಟ್ಟೆ, ಪಂಚಾಯತ್ ಅಧ್ಯಕ್ಷೆ ಸುನಿತಾ ಪೂಜಾರಿ, ಉದ್ಯಮಿ ಗುಣಪಾಲ್ ಜೈನ್ ಭಾಗವಹಿಸುವರು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

















































error: Content is protected !!
Scroll to Top