ಸಿಎಸ್-ಇಇಟಿ ಪರೀಕ್ಷೆ : ಕ್ರೈಸ್ಟ್‌ಕಿಂಗ್‌ನ 11 ವಿದ್ಯಾರ್ಥಿಗಳು ಉತ್ತೀರ್ಣ

ಕಾರ್ಕಳ : ಭಾರತೀಯ ಕಂಪೆನಿ ಸೆಕ್ರೆಟರಿ ಮಂಡಳಿ ನಡೆಸಿದ ರಾಷ್ಟ್ರಮಟ್ಟದ ಕಂಪೆನಿ ಸೆಕ್ರೆಟರಿ ಪ್ರವೇಶ ಪರೀಕ್ಷೆ (ಸಿಎಸ್‌ಇಇಟಿ)ಯಲ್ಲಿ ಕ್ರೈಸ್ಟ್‌ಕಿಂಗ್‌ ಪದವಿ ಪೂರ್ವ ಕಾಲೇಜಿನ ಒಟ್ಟು 11 ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲಿಯೇ ಉತ್ತೀರ್ಣರಾಗಿದ್ದಾರೆ. ಸಂಸ್ಥೆಯಿಂದ ಒಟ್ಟು 15 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಜೇಡನ್ ಕುವೆಲ್ಲೊ 200ಕ್ಕೆ 171 ಅಂಕ ಪಡೆದುಕೊಳ್ಳುವುದರ ಮೂಲಕ ತಾಲೂಕಿಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಉಳಿದಂತೆ ದಿಶಾಂತ್ (166/200), ಜಿತೇಶ್ ಪಿಂಟೊ (147/200), ಮೊಹಮ್ಮದ್ ಸುಬಾನ್ (144/200), ಪೂರ್ಣೇಶ್ವರಿ (141/200), ವೀಕ್ಷಿತ್ ಆಚಾರ್ಯ (131/200), ಸಿಯಾ ಕ್ಯಾರೊಲ್ ಡಿಕ್ರೂಸ್(123/200), ಮಹಿಪಾಲ್ ಸಿಂಗ್ (119/200), ಸ್ವಸ್ತಿಕ್ ಎಸ್. ಪೂಜಾರಿ (118/200), ನಿರಾಲಿ ಜೈನ್ (100/200), ಶ್ರಾವ್ಯ (100/200) ಉತ್ತೀರ್ಣರಾದ ವಿದ್ಯಾರ್ಥಿಗಳಾಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಕ್ರೈಸ್ಟ್‌ಕಿಂಗ್‌ ಪದವಿ ಪೂರ್ವ ಕಾಲೇಜಿನ ಸಿಎ ಮತ್ತು ಸಿಎಸ್ ತರಬೇತಿ ತಂಡದಿಂದ ತರಬೇತಿಯನ್ನು ಪಡೆದುಕೊಂಡಿದ್ದರು. ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ತರಬೇತಿ ನೀಡಿದ ಉಪನ್ಯಾಸಕ ತಂಡ ಹಾಗೂ ಸಂಸ್ಥೆಯ ಬೋಧಕ ವರ್ಗದವರು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.



































































































error: Content is protected !!
Scroll to Top