ಜಿ.ಎಸ್.ಬಿ. ಮಹಿಳಾ ವಿಭಾಗ ಕಾರ್ಕಳ : ವಾರ್ಷಿಕೋತ್ಸವ – ಮಹಾಸಭೆ

ಕಾರ್ಕಳ : ಜಿ.ಎಸ್.ಬಿ. ಮಹಿಳಾ ವಿಭಾಗ ಕಾರ್ಕಳ ಇದರ ವಾರ್ಷಿಕೋತ್ಸವ ಮತ್ತು ಮಹಾಸಭೆ ಜ. 19ರಂದು ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ಸುರಮಣಿ ಮಹಾಲಕ್ಷ್ಮಿ ಶೆಣೈ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಭಾರತದ ಇತಿಹಾಸವನ್ನು ಗಮನಿಸಿದರೆ ಮಹಿಳೆಯರು ಕೌಟುಂಬಿಕ ಜವಾಬ್ದಾರಿಯೊಂದಿಗೆ ಕೇವಲ ಮನೆಗೆ ಸೀಮಿತವಾಗದೆ ಸಮಾಜದ ಬೇರೆ ಬೇರೆ ಕ್ಷೇತ್ರದಲ್ಲಿ ಮಾಡಿದ ಸಾಧನೆ ಸ್ಫೂರ್ತಿದಾಯಕವಾದುದು. ಮಹಿಳೆಯ ಸಂತೋಷದಲ್ಲಿ ಕುಟುಂಬ ಮತ್ತು ಸಮಾಜದ ಸಂತೋಷ ಅಡಗಿದೆ ಎಂದು ಹೇಳಿದರು.

ಮಹಾಲಕ್ಷ್ಮಿ ಶೆಣೈ ಅವರಿಗೆ ಅಭಿನಂದನೆ

ವಿದ್ಯಾರ್ಥಿವೇತನ – ಸನ್ಮಾನ
ಕಾರ್ಯಕ್ರಮದಲ್ಲಿ ನಾಲ್ವರು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಇದೇ ಸಂದರ್ಭ ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿ ನಡೆಸಿದ ಪರೀಕ್ಷೆಯಲ್ಲಿ ಕಂಪ್ಯೂಟರ್ ಸೈನ್ಸ್ ಅಂಡ್ ಡಿಸೈನ್ ವಿಭಾಗದಲ್ಲಿ ಐದನೇ ರ್‍ಯಾಂಕ್ ಪಡೆದ ಶ್ವೇತಾ ಬಾಳಿಗ, ದ್ವಿತೀಯ ಪಿಯುಸಿಯಲ್ಲಿ 9ನೇ ರ್‍ಯಾಂಕ್ ಪಡೆದ ಸಂಜನಾ ಶೆಣೈ, ಪಿಎಚ್‌ಡಿ ಪದವಿಧರೆ ಹಾಗೂ ಯಕ್ಷಗಾನ ತಾಳ ಮದ್ದಲೆ ಕಲಾವಿದೆ ಭುವನೇಂದ್ರ ಕಾಲೇಜು ಉಪನ್ಯಾಸಕಿ ಡಾ. ಮಾಲತಿ, ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 622/625 ಅಂಕ ಪಡೆದ ಮಾನಸಿ ನಾಯಕ್, 621 ಅಂಕ ಪಡೆದ ಬಿ. ಸಿಂಚನಾ ನಾಯಕ್, ಹಾರ್ಮೋನಿಯಂ ಜೂನಿಯರ್ ಪರೀಕ್ಷೆ ಹಾಗೂ ತಬಲಾ ಜೂನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ ಪಡೆದ ಐಶ್ವರ್ಯ ಪೈ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 6ನೇ ರ್‍ಯಾಂಕ್ ಸಹನಾ ನಾಯಕ್‌ ಅವರನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ವಿವಿಧ ಆಟೋಟ ಸ್ಪರ್ಧೆ, ರೆಟ್ರೋ ನೃತ್ಯ ಸ್ಪರ್ಧೆ ಹಾಗೂ ಛಧ್ಮವೇಷ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಂಧ್ಯಾ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಆರತಿ ಪೈ, ಮಮತಾ ಶೆಣೈ, ರಾಖಿ ಭಟ್, ಲಲಿತಾ ಭಟ್ ಹಾಗೂ ಪಲ್ಲವಿ ಪೈ ಉಪಸ್ಥಿತರಿದ್ದರು. ರೇಷ್ಮಾ ಶೆಣೈ ಪ್ರಾರ್ಥಿಸಿದರು. ಕಾರ್ಯದರ್ಶಿ ಪ್ರಜ್ಞಾಪೈ ವರದಿ ವಾಚಿಸಿದರು. ಕೋಶಾಧಿಕಾರಿ ವಾರಿಜಾ ವಿ. ಕಾಮತ್ ಆಯವ್ಯಯ ಮಂಡಿಸಿದರು. ಪ್ರಭಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶ್ವೇತಾ ಶೆಣೈ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.



































































































error: Content is protected !!
Scroll to Top