ಕಾರ್ಕಳ : ವಾಂಟ್ರಾಯಿ ಪದವು ಜನನಿ ಮಿತ್ರ ಮಂಡಳಿ ರಜತ ಸಂಭ್ರಮದ ಪ್ರಯುಕ್ತ ಜ. 11ರಂದು ಬೆಳಿಗ್ಗೆ 6.30ಕ್ಕೆ ಮ್ಯಾರಥಾನ್ – ಆರೋಗ್ಯದ ಕಡೆ ನಮ್ಮ ಓಟ ನಡೆಯಲಿದೆ. ಓಟವು ಗುಂಡ್ಯಡ್ಕ ವೃತ್ತದಿಂದ ಪ್ರಾರಂಭಗೊಳ್ಳಲಿದ್ದು, 14 ರಿಂದ 17 ವರ್ಷದ ಬಾಲಕರ ವಿಭಾಗ, 18 ರಿಂದ 21 ವರ್ಷದ ತರುಣರ ವಿಭಾಗ, 14 ರಿಂದ 21 ವರ್ಷದ ವಿದ್ಯಾರ್ಥಿನಿಯರ ವಿಭಾಗವಾಗಿ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಪ್ರತಿ ವಿಭಾಗದಲ್ಲೂ ಮೂರು ಸ್ಥಾನಗಳವರೆಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಜೊತೆಗೆ 4 ಮತ್ತು 5ನೇ ಸ್ಥಾನಕ್ಕೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು. ಭಾಗವಹಿಸುವ ಎಲ್ಲಾ ಸ್ಪರ್ಧಿಗಳು ದಿನಾಂಕ ಜ. 10ರ ಸಂಜೆ 4 ಗಂಟೆಯೊಳಗೆ ತಮ್ಮ ಆಧಾರ್ ಕಾರ್ಡಿನ ಪ್ರತಿಯೊಂದಿಗೆ ನೊಂದಾಯಿಸಿಕೊಳ್ಳಬೇಕು. ನೊಂದಾಯಿಸಲ್ಪಟ್ಟವರು ಬೆಳಿಗ್ಗೆ 6.30 ರ ಒಳಗೆ ಗುಂಡ್ಯಡ್ಕ ವೃತ್ತದ ಬಳಿ ಕಡ್ಡಾಯವಾಗಿ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ 9880197475, 9591513162, 9844953511 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಜನನಿ ಮಿತ್ರ ಮಂಡಳಿ ವಾಂಟ್ರಾಯಿ ಪದವು – ರಜತ ಸಂಭ್ರಮದ ಪ್ರಯುಕ್ತ ಮ್ಯಾರಥಾನ್ ಓಟ
























