ಮಾಳ ಪಂಚಾಯತ್‌ – ಪಲಾನುಭವಿಗಳಿಗೆ ಸವಲತ್ತು ವಿತರಣೆ

ಕಾರ್ಕಳ : ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ ಮಾಳದ ಶ್ರೀರಾಮ ಮಂದಿರಲ್ಲಿ ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಸಕ ವಿ. ಸುನಿಲ್ ಕುಮಾರ್ ಫಲಾನುಭವಿಗಳಿಗೆ ನೀರಿನ ಬ್ಯಾರಲ್ ಮತ್ತು ಚೆಕ್ ವಿತರಿಸಿದರು. ಬಳಿಕ ಮಾಳ ಚೌಕಿಯಲ್ಲಿ ನಿರ್ಮಿಸಿದ ಸ್ವಾಮಿ ವಿವೇಕಾನಂದ ಬಸ್ ತಂಗುದಾಣವನ್ನು ಉದ್ಘಾಟಿಸಿದರು. ಬಳಿಕ ಮಾಳ ಕೊಂಡಿಬೆಟ್ಟು ಎಂಬಲ್ಲಿ ಶಾಸಕರ ವಿಶೇಷ ಅನುದಾನದಿಂದ ನಿರ್ಮಾಣವಾಗಲಿರುವ ಕಿಂಡಿ ಅಣೆಕಟ್ಟು ಸಹಿತ ಸೇತುವೆಗೆ ಸುನಿಲ್‌ ಕುಮಾರ್ ಶೀಲಾನ್ಯಾಸ ನೆರವೇರಿಸಿದರು.‌ ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುರೇಖಾ ಬಿ., ಪಂಚಾಯತ್ ಉಪಾಧ್ಯಕ್ಷೆ ವಿಮಲಾ ಪೂಜಾರಿ, ಗ್ರಾಮ ಆಡಳಿತ ಅಧಿಕಾರಿ, ಪಂಚಾಯರ್ ಸದಸ್ಯರು, ಸಮಾಜ ಕಲ್ಯಾಣ ಅಧಿಕಾರಿಗಳು, ಶಿಕ್ಷಣ ಇಲಾಖೆ, ವಿಶೇಷ ಚೇತನ ಇಲಾಖಾ ಅಧಿಕಾರಿಗಳು, ಅರೋಗ್ಯ ಇಲಾಖೆ ಸಿಬ್ಬಂದಿ, ಫಲನುಭವಿಗಳು ಗ್ರಾಮಸ್ತರು ಉಪಸ್ಥಿತರಿದ್ದರು. ಪಂಚಾಯತ್ ಕಾರ್ಯದರ್ಶಿ ಸವಿತಾ ಕುಮಾರಿ ಕಾರ್ಯಕ್ರಮ ನಿರೂಪಿಸಿ, ಪಂಚಾಯತ್ ಸದಸ್ಯ ಸುಧೀರ್ ಸ್ವಾಗತಿಸಿ ವಂದಿಸಿದರು.





























































































































error: Content is protected !!
Scroll to Top