ಜ. 25-29 : ಅತ್ತೂರು ಸಂತ ಲಾರೆನ್ಸ್‌ ಬಸಿಲಿಕದ ವಾರ್ಷಿಕ ಮಹೋತ್ಸವ

ಕಾರ್ಕಳ : ಪ್ರಸಿದ್ದ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ 2026ರ ವಾರ್ಷಿಕ ಮಹೋತ್ಸವ ಜ. 25ರಿಂದ 29ರವರೆಗೆ ಜರುಗಲಿದೆ. ಈ ಬಾರಿಯ ಮಹೋತ್ಸವದ ಸಂದೇಶ “ನಾನು ನಿಮ್ಮನ್ನು ಪ್ರೀತಿಸಿದ್ದೇನೆ” ಎಂಬುವುದಾಗಿದೆ.

ಜ. 25ರ ಬೆಳಿಗ್ಗೆ 10 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆ ನಡೆಯಲಿದ್ದು, ಉಡುಪಿ ಧರ್ಮಾಧ್ಯಕ್ಷ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ ಹಾಗೂ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷ ಪರಮಪೂಜ್ಯ ಲುವಿಸ್‌ ಪಾವ್ಲ್‌ ಡಿಸೋಜಾ ಪ್ರಧಾನ ಗುರುಗಳಾಗಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದಾರೆ. ಜ. 26ರಂದು ಸಂಜೆ 5 ಗಂಟೆಗೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆಯನ್ನು, ಕಾರವಾರ ಧರ್ಮಾಧ್ಯಕ್ಷ ಪರಮಪೂಜ್ಯ ದುಮಿಂಗ್‌ ಡಾಯಸ್ ನೆರವೇರಿಸಲಿದ್ದಾರೆ. ಜ. 27ರಂದು ಸಂಜೆ 6.30ಕ್ಕೆ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆಯನ್ನು ಅಲ್ಲಾಹಾಬಾದ್ ಧರ್ಮಾಧ್ಯಕ್ಷ ಪರಮಪೂಜ್ಯ ಲುವಿಸ್‌ ಮಸ್ಕರೇನಸ್ ನೆರವೇರಿಸಲಿದ್ದಾರೆ. ‌

ಜ. 28ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆಯನ್ನು ಉಡುಪಿ ಧರ್ಮಾಧ್ಯಕ್ಷ ಪರಮಪೂಜ್ಯ ಜೆರಾಲ್ಡ್ ಐಸಾಕ್ ಲೋಬೋ ಹಾಗೂ ಅಹ್ಮೀರ್‌ ಧರ್ಮಾಧ್ಯಕ್ಷ ಪರಮಪೂಜ್ಯ ಜೋನ್‌ ಕರ್ವಾಲ್ಲೊ ಪ್ರಧಾನ ಗುರುಗಳಾಗಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದಾರೆ. ಜ. 29ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಧರ್ಮಾಧ್ಯಕ್ಷ ಪರಮಪೂಜ್ಯ ಪೀಟರ್ ಪಾವ್ಲ್‌ ಸಲ್ಡಾನ್ಹಾ ಮಹೋತ್ಸವದ ಪ್ರಮುಖ ಸಂಭ್ರಮದ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ.

ಜ. 29ರಂದು ರಾತ್ರಿ ಹವ್ಯಾಸಿ ಕಲಾವಿದರು ಮಂಗಳೂರು ಇವರಿಂದ ಜಿ. ಕೆ. ಶ್ರೀನಿವಾಸ್‌ ಸಾಲ್ಯಾನ್‌ ಬೊಂದೆಲ್‌ ವಿರಚಿತ ಧರ್ಮ ರಕ್ಷಣೆ ಎಂಬ ಕನ್ನಡ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.











































































error: Content is protected !!
Scroll to Top