ಕಾರ್ಕಳ : ವಿಶ್ವ ಹಿಂದೂ ಪರಿಷದ್ ಗೊರಕ್ಷಾ ವಿಭಾಗ ಮತ್ತು ಬಜರಂಗದಳ ವತಿಯಿಂದ ಡಿ. 7ರ ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ಕಾರ್ಕಳ ಅನಂತಶಯನದಿಂದ ಬಂಡಿಮಠ ಬಸ್ ನಿಲ್ದಾಣವರೆಗೆ ಗೋವಿಗಾಗಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷದ್ ಕಾರ್ಕಳ ಪ್ರಖಂಡ ಕಾರ್ಯದರ್ಶಿ ಪ್ರಸಾದ್ ನಿಟ್ಟೆ ತಿಳಿಸಿದರು.
ಅಂದು ಕಾರ್ಕಳದಲ್ಲಿರುವ ಗೋಶಾಲೆಗಳಿಗೆ ತೆರಳಿ ಗೋ ಗ್ರಾಸ ವಿತರಿಸಲಾಗುವುದು. ಈ ಕಾರ್ಯದಲ್ಲಿ ಸಂಘ ಸಂಸ್ಥೆಗಳು, ದೇವಸ್ಥಾನ ಸಮಿತಿಗಳು, ಹಿಂದೂಗಳೆಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿದ ಅವರು, ಹುಲ್ಲು, ಹಿಂಡಿ, ಅಕ್ಕಿ, ಹಸಿ ಹುಲ್ಲು, ನೀಡಿ ಸಹಕರಿಸುವಂತೆ ಮನವಿ ಮಾಡಿಕೊಂಡರು. ಹೊರೆಕಾಣಿಕೆಯಲ್ಲಿ ಜೊತೆಯಾಗುವವರು ಗೋ ಗ್ರಾಸ ನೀಡುವವರು ವಿಶ್ವ ಹಿಂದೂ ಪರಿಷದ್‌ನ ಸುನಿಲ್ ನಿಟ್ಟೆ, ಜಿಲ್ಲಾ ಗೊಕ್ಷಾ ಪ್ರಮುಖ್ ಶರತ್ ಸಾಣೂರು ಹಾಗೂ ಪ್ರಖಂಡ ಗೋರಕ್ಷಾ ಪ್ರಮುಖ್ ಪ್ರಸಾದ್ ದೂಪದಕಟ್ಟೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ. 7 : ವಿಶ್ವ ಹಿಂದೂ ಪರಿಷ್ ವತಿಯಿಂದ ಗೋವಿಗಾಗಿ ಹೊರೆಕಾಣಿಕೆ ಮೆರವಣಿಗೆ – ಪ್ರಸಾದ್ ನಿಟ್ಟೆ

















