ಕಾರ್ಕಳ : ಟಯರ್ ಸ್ಫೋಟಗೊಂಡು ಆ್ಯಪಲ್ ತುಂಬಿದ್ದ ಲಾರಿ ಬೆಂಕಿಗೆ ಆಹುತಿಯಾದ ಘಟನೆ ನ. 22ರ ಮುಂಜಾನೆ ಮಾಳ ಘಾಟಿಯಲ್ಲಿ ಸಂಭವಿಸಿದೆ. ಕಾಶ್ಮೀರದಿಂದ ಆ್ಯಪಲ್ ತುಂಬಿಸಿಕೊಂಡು ಮಂಗಳೂರು ಕಡೆಗೆ ಲಾರಿ ಸಾಗುತ್ತಿದ್ದು, ಮಾಳ ಘಾಟಿಯಲ್ಲಿ ಬರುತ್ತಿದ್ದಾಗ ಸುಮಾರು 2 ಗಂಟೆಯ ವೇಳೆಗೆ ಲಾರಿಯ ಹಿಂದಿನ ಎಡಗಡೆಯ ಟಯರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಹತ್ತಿಕೊಂಡಿದೆ. ಬೆಂಕಿಯಿಂದಾಗಿ ಲಾರಿ ಸುಟ್ಟು ಹೋಗಿದ್ದು, ಆ್ಯಪಲ್ ಹಾನಿಯಾಗಿದೆ. ಅದೃಷ್ಟವಶಾತ್ ಲಾರಿಯಲ್ಲಿದ್ದ ಚಾಲಕರು ಅಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕಾಗಮಿಸಿದ ಕಾರ್ಕಳ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಅಚ್ಯುತ ಕರ್ಕೇರ, ಹರಿಪ್ರಸಾದ್ ಶೆಟ್ಟಿ, ಮಹಮ್ಮದ್ ಮುಝಾಂಬಿಲ್, ದಿನೇಶ್ ಮತ್ತು ನಿತ್ಯಾನಂದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮಾಳ ಘಾಟಿಯಲ್ಲಿ ಟಯರ್ ಸ್ಫೋಟಗೊಂಡು ಆ್ಯಪಲ್ ತುಂಬಿದ್ದ ಲಾರಿಗೆ ಬೆಂಕಿ





















