ಕಾರ್ಕಳ : ತಾಲೂಕು ಕಚೇರಿ ಬಳಿಯಿರುವ ಕುಕ್ಕುಂದೂರು ಶ್ರೀ ರಾಮ ಮಂದಿರದಲ್ಲಿ ನ.22ರಂದು ನಗರ ಭಜನೋತ್ಸವದ ಮಂಗಲೋತ್ಸವ ನಡೆಯಲಿದೆ.
2006ರಲ್ಲಿ ಪ್ರಾರಂಭವಾಗಿರುವ ಶ್ರೀ ರಾಮ ಮಂದಿರದಲ್ಲಿ 2013ರಲ್ಲಿ ಮನೆ -ಮನದಲ್ಲಿ ಭಜನೆ ಎಂಬ ವಿನೂತನ ಕಾರ್ಯಕ್ರಮದಡಿಯಲ್ಲಿ ನಗರ ಭಜನೆ ಪ್ರಾರಂಭಿಸಿದ್ದು, ಪ್ರತಿ ವರ್ಷ ನವರಾತ್ರಿ ಮುಗಿದ ಮರು ದಿನದಿಂದ ಪ್ರಾರಂಭಗೊಳ್ಳುವ ನಗರ ಭಜನೆ ಸುಮಾರು 45 ದಿನಗಳವರೆಗೆ ನಡೆಯುತ್ತದೆ. ಮಂದಿರ ವ್ಯಾಪ್ತಿಯ ಪ್ರತಿ ಮನೆಗೆ ಸಂಜೆ ತೆರಳಿ ಭಜನೆ ಮಾಡಲಾಗುತ್ತದೆ. ಈ ವರ್ಷದ ನಗರ ಭಜನೆಯು ಅ. 3ರಂದು ಪ್ರಾರಂಭಗೊಂಡಿದ್ದು ಇಂದು ಸಂಜೆ ಮಂಗಲೋತ್ಸವ ನಡೆಯಲಿದೆ. ಮಂಗಲೋತ್ಸವದ ಪ್ರಯುಕ್ತ ಶ್ರೀ ರಾಮ ದೇವರ ಮೆರವಣಿಗೆಯು ಮಿನಿ ವಿಧಾನ ಸೌಧದ ಮುಂದಿನಿಂದ ಮಹಾಸತಿ ಪ್ರಾವಿಷನ್‌ವರೆಗೆ ಸಾಗಿ ಅಲ್ಲಿಂದ ಹಿಂದಿರುಗಿ ಮಂದಿರಕ್ಕೆ ಬಂದು ಮಹಾಪೂಜೆ ನಡೆಯಲಿದೆ ಎಂದು ಮಂದಿರದ ಅರ್ಚಕರಾದ ಆರ್. ಗಣೇಶ್ ಶೆಣೈ ತಿಳಿಸಿದ್ದಾರೆ.
ನ. 22 : ಶ್ರೀ ರಾಮ ಮಂದಿರ – ನಗರ ಭಜನಾ ಮಂಗಲೋತ್ಸವ





















