ರತ್ನಾಕರ್‌ ಅವರಿಗೆ ಜಾಮೀನು ಮಂಜೂರು

ಉಡುಪಿ : ಪೊಲೀಸರಿಂದ ಬಂಧಿತರಾಗಿದ್ದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಮುಖಂಡ ರತ್ನಾಕರ್‌ ಅಮೀನ್ ಅವರಿಗೆ ಜಾಮೀನು ಮುಂಜೂರಾಗಿದೆ. ಜಾಮೀನು ಮಂಜೂರುಗೊಳಿಸಿ ಉಡುಪಿ ಪ್ರಧಾನ ಸಿವಿಲ್ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ. ರತ್ನಾಕರ್‌ ಪರವಾಗಿ ನ್ಯಾಯವಾದಿ ಮಟ್ಟಾರ್ ರತ್ನಾಕರ್ ಹೆಗ್ಡೆ ವಾದಿಸಿದ್ದರು.
ನ. 15ರಂದು ದೆಹಲಿ ಸ್ಫೋಟವನ್ನು ಖಂಡಿಸಿ ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ರತ್ನಾಕರ್‌ ಅಮೀನ್‌ ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪದಡಿಯಲ್ಲಿ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ. 18ರ ಬೆಳಿಗ್ಗೆ ಉಡುಪಿ ನಗರ ಪೊಲೀಸರು ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ರತ್ನಾಕರ್‌ ಅವರನ್ನು ಬಂಧಿಸಿದ್ದಾರೆ.









































































































error: Content is protected !!
Scroll to Top