ಕಾರ್ಕಳ : ಪಳ್ಳಿ ಗ್ರಾಮ ಮಾತ್ರವಲ್ಲದೆ ತುಳುನಾಡಿನ ವಿವಿಧ ದೇವಸ್ಥಾನಗಳಲ್ಲಿ ಬ್ರಹ್ಮ ವಾಹಕರಾಗಿ ಸೇವೆ ಸಲ್ಲಿಸುತ್ತಿರುವ, 2025ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಳ್ಳಿ ಗ್ರಾಮದ ಗುರುಪ್ರಸಾದ್ ಭಟ್ ಅವರನ್ನು ಪಳ್ಳಿ ನಿಂಜೂರು ಬಿಜೆಪಿ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಈ ಸಂಧರ್ಭ ಬೈಲೂರು ಶಕ್ತಿ ಕೇಂದ್ರ ಅಧ್ಯಕ್ಷ ಸಂದೀಪ್ ಅಮೀನ್, ಉಸ್ತುವಾರಿ ಸುರೇಶ್ ಪೂಜಾರಿ, ಸ್ಥಾನೀಯ ಅಧ್ಯಕ್ಷ ಮೋಹನ್ ದಾಸ್ ನಾಯಕ್, ಕಾರ್ಯದರ್ಶಿ ಹರೀಶ್ ವಿ. ಆಚಾರ್ಯ, ಪಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋಪಾಲ್ ಆಚಾರ್ಯ, ಮಾಜಿ ಉಪಾಧ್ಯಕ್ಷ ಹರೀಶ್ ಬಿ. ನಾಯಕ್, ಸದಸ್ಯೆ ಪ್ರತಿಮಾ ನಾಯಕ್, ಪ್ರಮುಖರಾದ ಚಂದ್ರಹಾಸ ಶೆಟ್ಟಿ , ಸುನಿಲ್ ಕೋಟ್ಯಾನ್, ಸನತ್ ಹೆಗ್ಡೆ ಹಾಗೂ ನವೀನ್ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರುತ ಪಳ್ಳಿ ಗುರುಪ್ರಸಾದ್ ಭಟ್ ಅವರಿಗೆ ಸನ್ಮಾನ






























































