ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಾಳೆ ಮುಂಜಾನೆ ವಿಶ್ವರೂಪ ದರ್ಶನ

ಕಾರ್ಕಳ : ಪಡು ತಿರುಪತಿಯೆಂದೇ ಖ್ಯಾತಿ ಪಡೆದ ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಾಳೆ (ಅ. 26) ಮುಂಜಾನೆ 3 ಗಂಟೆಗೆ ವಿಶ್ವರೂಪ ದರ್ಶನ ನಡೆಯಲಿದೆ.

ಆಷಾಢ, ಕಾರ್ತಿಕ ಮಾಸಗಳಲ್ಲಿ ಪಂಡರಾಪುರದ ದೇವಸ್ಥಾನವು ಭೂ ವೈಕುಂಠ ಆಗಿ ಬಿಡುತ್ತದೆ. ಅದೇ ರೀತಿ ಕರಾವಳಿಯಲ್ಲಿನ ವೆಂಕಟರಮಣ ದೇವಸ್ಥಾನಗಳಲ್ಲಿ ಕಾರ್ತಿಕ ಮಾಸದ ಆಚರಣೆ ತುಂಬಾ ಮಹತ್ವದ್ದು. ಕಾರ್ತಿಕ ಮಾಸದ ಲಕ್ಷ ದೀಪೋತ್ಸವ, ಕೆರೆ ದೀಪೋತ್ಸವ, ಮೃಗಬೇಟೆ ಉತ್ಸವ, ಮುಂಜಾನೆಯ ಪಕ್ಷಿ ಜಾಗರಣ ಪೂಜೆ ಎಲ್ಲವೂ ವಿಶೇಷವೇ ಅಗಿದೆ. ಕಾರ್ತಿಕ ಮಾಸದ ಮುಖ್ಯವಾದ ಉತ್ಸವ ಲಕ್ಷ ದೀಪೋತ್ಸವಕ್ಕೆ ಪೂರ್ವಭಾವಿಯಾಗಿ ನಡೆಯುವುದು ‘ವಿಶ್ವರೂಪ’. ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಇದು ಭಾರೀ ವಿಶೇಷ. ಜಾತಿ, ಮತ, ಪಂಥಗಳ ಭೇದವಿಲ್ಲದೆ ಭಕ್ತರು ಈ ಉತ್ಸವದಲ್ಲಿ ಭಾಗವಹಿಸುತ್ತಾರೆ.

ಬೆಳಿಗ್ಗೆ ಮೂರು ಘಂಟೆಗೆ ಮೊದಲೇ ವೆಂಕಟರಮಣ ದೇವಳದ ಮುಂದೆ ಸಾವಿರಾರು ಭಕ್ತರು ಬಂದು ಸರತಿಯ ಸಾಲಿನಲ್ಲಿ ನಿಂತಿರುತ್ತಾರೆ. ಇಡೀ ದೇವಾಲಯವು ಹೂವುಗಳಿಂದ, ರಂಗೋಲಿಗಳಿಂದ, ಬೆಳಗುವ ಹಣತೆಗಳಿಂದ ಅಲಂಕಾರಗೊಂಡಿರುತ್ತದೆ. ಶ್ರೀ ಕೃಷ್ಣನು ಅರ್ಜುನನಿಗೆ ಕುರುಕ್ಷೇತ್ರದಲ್ಲಿ ತೋರಿಸಿದ ವಿಶ್ವರೂಪದ ಹಿನ್ನೆಲೆಯಲ್ಲಿ ಒಂದೇ ಒಂದು ವಿದ್ಯುದ್ದೀಪವೂ ಇಲ್ಲದೇ ಎಲ್ಲವೂ ನೈಸರ್ಗಿಕ ಮಣ್ಣಿನ ಹಣತೆಗಳ ಬೆಳಕಿನಲ್ಲಿ ವೆಂಕಟರಮಣ ದೇವಳವು ಮಿಂದೇಳುತ್ತದೆ. ಸೂರ್ಯೋದಯದ ಮೊದಲು ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ. ಆಗಮಿಸಿದ ಸಾವಿರಾರು ಭಕ್ತರಿಗೆ ಪ್ರಸಾದವಾಗಿ ಇಲ್ಲಿಯೇ ತಯಾರಾದ ತುಪ್ಪದ ತಿರುಪತಿಯ ಲಾಡು ಮತ್ತು ಫಲವಸ್ತುಗಳನ್ನು ನೀಡಲಾಗುತ್ತದೆ.





























































































error: Content is protected !!
Scroll to Top