ಕಾರ್ಕಳ ಬಿಜೆಪಿ ಮಹಿಳಾ ಮೋರ್ಚ ವತಿಯಿಂದ ಗೋವು ಪೂಜೆ

ಕಾರ್ಕಳ : ಕಾರ್ಕಳ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಅ. 24ರಂದು ತೆಳ್ಳಾರು ಶ್ರೀ ವೆಂಕಟರಮಣ ಗೋಶಾಲೆಯಲ್ಲಿ ಗೋವು ಪೂಜೆ ಜರುಗಿತು. ಮಹಿಳಾ ಮೋರ್ಚಾದ ಅಧ್ಯಕ್ಷೆ ವಿನಯ ಡಿ. ಬಂಗೇರ ಅವರ ನೇತೃತ್ವದಲ್ಲಿ ಮ. ಮೋ. ಕಾರ್ಯಕರ್ತೆಯರು ಗೋವುಗಳಿಗೆ ಪೂಜೆ ಸಲ್ಲಿಸಿ, ತಿನಸುಗಳನ್ನು ನೀಡಿ, ಮಹಿಳಾ ಮೋರ್ಚಾದ ಗೋಹುಂಡಿಯ ಕಾಣಿಕೆ ರೂ. 2005 ಸಮರ್ಪಿಸಿದರು.

ಈ ಸಂದರ್ಭ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಮಾಲಿನಿ ಜೆ ಶೆಟ್ಟಿ, ಕಾರ್ಯದರ್ಶಿ ಕವಿತಾ ಹರೀಶ್, ಕಾರ್ಯಾಲಯ ಕಾರ್ಯದರ್ಶಿ ಜ್ಯೋತಿ ರಮೇಶ್‌, ಮಹಿಳಾ ಮೋರ್ಚಾ ತಾಲೂಕು ಉಪಾಧ್ಯಕ್ಷರಾದ ಭಾರತಿ ಅಮೀನ್, ಪಲ್ಲವಿ ಪ್ರವೀಣ್, ಕಾರ್ಯದರ್ಶಿಗಳಾದ ಲಕ್ಷ್ಮೀ ಶೆಟ್ಟಿ, ಲಕ್ಷ್ಮೀ ಕಿಣಿ, ಕೋಶಾಧಿಕಾರಿ ಸುಚಿತ್ರಾ ಶೆಟ್ಟಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶುಭಾ ಪಿ. ಶೆಟ್ಟಿ, ಮಮತಾ ಸುವರ್ಣ ಹಾಗೂ ಪ್ರಮೀಳಾ ಪೂಜಾರಿ, ಪುರಸಭಾ ಮಾಜಿ ಅಧ್ಯಕ್ಷೆ ಸುಮಾ ಕೇಶವ್, ಪದಾಧಿಕಾರಿಗಳಾದ ಗೀತಾ ದಾನಶಾಲೆ, ದೀಪಾ ನಾಯಕ್, ಜ್ಯೋತಿ, ಬಬಿತಾ, ನಿರೀಕ್ಷಾ ರಾಜೇಶ್, ರಜನಿ ಹೆಗ್ಡೆ, ಸ್ವಾತಿ ಮತ್ತಿತರರು ಉಪಸ್ಥಿತರಿದ್ದರು.









































































































error: Content is protected !!
Scroll to Top