ಎಕೆಎಂಎಸ್‌ ಬಸ್ ಮಾಲಕ ಎಂ. ಎಸ್. ಸೈಫ್ ಕೊಲೆ

ಉಡುಪಿ : ಎ.ಕೆ.ಎಂ.ಎಸ್ ಬಸ್ ಮಾಲಕ ಅತ್ರಾಡಿ ನಿವಾಸಿ ರೌಡಿಶೀಟರ್ ಎಂ.ಎಸ್. ಸೈಫುದ್ದಿನ್ ಕೊಲೆಯಾಗಿದ್ದಾರೆ. ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರಿನ ಸಾಲ್ಮರದಲ್ಲಿನ ಸೈಫ್‌ ಮನೆಯಲ್ಲಿ ಸೆ. 27ರಂದು ಬೆಳಗ್ಗೆ 10ರಿಂದ 11 ಗಂಟೆಯ ನಡುವೆ ಈ ಕೃತ್ಯ ನಡೆದಿದೆ. ಮೊದಲು ಪಿಸ್ತೂಲಿನಿಂದ ಶೂಟ್ ಮಾಡಿ ನಂತರ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಸೈಫ್ ಎರಡು ಕೊಲೆ ಪ್ರಕರಣದ ಆರೋಪಿಯಾಗಿದ್ದು, ಹಿರಿಯಡ್ಕ ಮತ್ತು ಉಡುಪಿ ಪೊಲೀಸ್‌ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದಾನೆ. ಈತನ ಮೇಲೆ 18 ಕ್ರಿಮಿನಲ್ ಕೇಸುಗಳಿವೆ. ಮಲ್ಪೆಯ ಮನೆಯಲ್ಲಿ ಸೈಫ್‌ ಒಬ್ಬರೇ ಇದ್ದಾಗ ಮೂರು ಜನ ಆರೋಪಿಗಳು ಏಕಕಾಲದಲ್ಲಿ ಅಟ್ಯಾಕ್ ಮಾಡಿದ್ದಾರೆ. ಆರೋಪಿಗಳು ಎಕೆಎಂಎಸ್‌ ಬಸ್ ಸಂಸ್ಥೆಯ ಉದ್ಯೋಗಿಗಳು ಎಂದು ತಿಳಿದು ಬಂದಿದೆ. ದೇಹದ ಹಲವೆಡೆ ಇರಿದ ಗಾಯಗಳಿವೆ. ಕೊಲೆಗೆ ಕಾರಣ ಮತ್ತು ಆರೋಪಿಗಳ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ ಎಂದು ಉಡುಪಿ ಜಿಲ್ಲಾ ಎಸ್‌ಪಿ ಹರಿರಾಮ್ ಶಂಕರ್ ಹೇಳಿಕೆ ನೀಡಿದ್ದಾರೆ.































error: Content is protected !!
Scroll to Top