ಸೆ. 27 : ವಿಶ್ವಯಕ್ಷ ಕಲಾ ಬಳಗದಿಂದ ಶುಕ್ರ ಸಂಜೀವಿನಿ ಯಕ್ಷಗಾನ

ಕಾರ್ಕಳ : ನವರಾತ್ರಿ ಲಲಿತಾಪಂಚಮಿಯ ಪ್ರಯುಕ್ತ ಸೆ.27ರಂದು ಮಧ್ಯಾಹ್ನ 2ಗಂಟೆಗೆ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ತೆಂಕು – ಬಡಗಿನ ಸುಪ್ರಸಿದ್ಧ ಅತಿಥಿ ಕಲಾವಿದರಿಂದ ದ್ವಂದ್ವ ಭಾಗವತಿಕೆಯೊಂದಿಗೆ ಪ್ರಸಂಗ ಶುಕ್ರ ಸಂಜೀವಿನಿ ಅಮೋಘ ಯಕ್ಷಗಾನ ತಾಳಮದ್ದಳೆ ನಡೆಯಲಿರುವುದು.

ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶ ಕುಮಾರ್ ಹೆಬ್ರಿ ಮತ್ತು ಗಣೇಶ್ ಆಚಾರ್ಯ ಬಿಲ್ಲಾಡಿ, ಮದ್ದಳೆಯಲ್ಲಿ ಶಶಿಕುಮಾ‌ರ್ ಆಚಾರ್ಯ ಬೆಳ್ಳಳೆ, ಚೆಂಡೆವಾದನದಲ್ಲಿ ಶಿವಾನಂದ ಕೋಟ ಹಾಗೂ ಅರ್ಥಧಾರಿಗಳಾಗಿ ವಿದ್ವಾನ್ ಗಣಪತಿ ಭಟ್ ಸಂಕದಗುಂಡಿ, ಸದಾಶಿವ ಆಳ್ವ ತಲಪಾಡಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಭಾಗವಹಿಸಲಿರುವರು. ಭಗವದ್ಭಕ್ತರು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







































error: Content is protected !!
Scroll to Top