ನಾಳೆ BSNLನ ‘ಸ್ವದೇಶಿ’ 4ಜಿ ನೆಟ್‌ವರ್ಕ್ ಸೇವೆಗೆ ಪ್ರಧಾನಿ ಮೋದಿಯಿಂದ ಚಾಲನೆ

ದೆಹಲಿ : ಸರಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತದ (ಬಿಎಸ್‌ಎನ್‌ಎಲ್) ‘ಸ್ವದೇಶಿ’ 4ಜಿ ನೆಟ್‌ವರ್ಕ್‌ಗೆ ನಾಳೆ ಪ್ರಧಾನಿ ನರೇಂದ್ರ ಮೋದಿ ಒಡಿಶಾದ ಜಾರ್ಸುಗುಡದಲ್ಲಿ ಚಾಲನೆ ನೀಡಲಿದ್ದಾರೆ. ಡಿಜಿಟಲ್ ಭಾರತ್ ನಿಧಿ ಯೋಜನೆ ಮೂಲಕ ಭಾರತದ ಶೇ. 100 ರಷ್ಟು 4G ಸ್ಯಾಚುರೇಶನ್ ನೆಟ್‌ವರ್ಕ್ ಅನ್ನು ಸಹ ಪ್ರಧಾನಿ ಅನಾವರಣಗೊಳಿಸಲಿದ್ದಾರೆ.

ಭಾರತದ ಸ್ವದೇಶಿ ನಿರ್ಮಿತ ನೆಟ್‌ವರ್ಕ್ ಕ್ಲೌಡ್ ಆಧಾರಿತವಾಗಿದ್ದು, 5Gಗೆ ಸರಾಗವಾಗಿ ಅಪ್‌ಗ್ರೇಡ್ ಮಾಡಬಹುದು ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಬಿಎಸ್ಎನ್‌ಎಲ್‌ನ 4G ಸ್ಟ್ಯಾಕ್ ಅನ್ನು ಸೆಪ್ಟೆಂಬರ್ 27ರಂದು ದೇಶದ ಹಲವು ರಾಜ್ಯಗಳ ಸುಮಾರು 98,000 ಪ್ರದೇಶರಲ್ಲಿ ಬಿಡುಗಡೆ ಮಾಡಲಾಗುವುದು. ಇದು ಟೆಲಿಕಾಂ ವಲಯಕ್ಕೆ ಹೊಸ ಯುಗ. ಭಾರತವು ಟೆಲಿಕಾಂ ಉಪಕರಣಗಳನ್ನು ಉತ್ಪಾದಿಸುವ ಮತ್ತು ತಯಾರಿಸುವ ದೇಶಗಳ ಸಾಲಿಗೆ ಪ್ರವೇಶಿಸಿದ ಯುಗ. ಇದರಲ್ಲಿ ಡೆನ್ಮಾರ್ಕ್, ಸ್ವೀಡನ್, ದಕ್ಷಿಣ ಕೊರಿಯಾ, ಚೀನಾ ಸೇರಿವೆ. ಭಾರತ ಈಗ ಐದನೇ ದೇಶವಾಗಿದೆ ಎಂದು ಸಿಂಧಿಯಾ ಹೇಳಿದ್ದಾರೆ.

ಕುಗ್ರಾಮದಲ್ಲೂ ಬಿಎಸ್‌ಎನ್‌ಎಲ್‌ ಟವರ್ ನಿರ್ಮಾಣವಾಗುತ್ತಿದ್ದು, ಈಗಾಗಲೇ ಕಾರ್ಕಳ ತಾಲೂಕಿನಲ್ಲಿ ನೂರಾಲ್ ಬೆಟ್ಟು, ಕೌಡೂರು, ಕಾಂತಾವರ, ಹುಕ್ರಟ್ಟೆಯಲ್ಲಿ ನಿರ್ಮಾಣಗೊಂಡಿದೆ.







































error: Content is protected !!
Scroll to Top