ಕಾರ್ಕಳ ತಾಲೂಕಿನಾದ್ಯಂತ ಸಂಭ್ರಮದ ವಿಶ್ವಕರ್ಮ ಪೂಜೆ

ಕಾರ್ಕಳ : ಕಾರ್ಕಳ ತಾಲೂಕಿನಾದ್ಯಂತ ಕನ್ಯಾ ಸಂಕ್ರಮಣದಂದು (ಸೆ.16) ಸಂಭ್ರಮದ ವಿಶ್ವಕರ್ಮ ಪೂಜೆ ಜರುಗಿತು. ಕಾರ್ಕಳ ಪೆರ್ವಾಜೆ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ಅಧ್ಯಕ್ಷರಾದ ಬಿ. ಪ್ರಕಾಶ್‌ ಆಚಾರ್ಯ ನೇತೃತ್ವದಲ್ಲಿ ಬೆಳಿಗ್ಗಿನಿಂದ ವಿಶ್ವಕರ್ಮ ಯಜ್ಞ ಮತ್ತು ಪೂಜಾ ಕೈಂಕರ್ಯಗಳು ಜರುಗಿದ್ದು, ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರು ಈ ಪೂಜಾ ಕಾರ್ಯದಲ್ಲಿ ತೊಡಗಿದ್ದರು. ಸಂಜೆ 6.00ರಿಂದ ಭಜನಾ ಕಾರ್ಯಕ್ರಮದ ಮೂಲಕ ಸಂಜೆಯ ಮಹಾಪೂಜೆಯು ಸಂಪನ್ನಗೊಂಡಿತು. ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಪೂಜೆಯಲ್ಲಿ ಭಾಗವಹಿಸಿದ್ದರು.

ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದಲ್ಲಿ ವಿಶ್ವಕರ್ಮ ಯಜ್ಞದ ಮೂಲಕ ಆಡಳಿತ ಮೊಕ್ತೇಸರರೊಡಗೂಡಿ ಪ್ರಧಾನ ಅರ್ಚಕರಾದ ವಿಠಲ್‌ ಪುರೋಹಿತ್‌ ಅವರ ನೇತೃತ್ವದಲ್ಲಿ ವಿಶ್ವಕರ್ಮ ಪೂಜೆಯು ಸಂಪನ್ನಗೊಂಡಿತು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ, ಪಿ. ರವಿ ಆಚಾರ್ಯ, ನಿಟ್ಟೆ ಸುರೇಶ್‌ ಆಚಾರ್ಯ, ಕಾರ್ಕಳ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಎಂ. ರಮೇಶ್‌ ಆಚಾರ್ಯ, ಭಜನಾ ಸೇವಾ ಸಮಿತಿಯ ಅಧ್ಯಕ್ಷ ದಿನೇಶ್‌ ಆಚಾರ್ಯ ಅತ್ತೂರು ಮತ್ತು ಮಾಜಿ ಮೊಕ್ತೇಸರುಗಳು, ಭಕ್ತಾಭಿಮಾನಿಗಳು ಪೂಜೆಯಲ್ಲಿ ಪಾಲ್ಗೊಂಡರು.

ಗೋವಿಂದೂರು ರಸ್ತೆ ಬೈಲೂರು ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ವಿಶ್ವಕರ್ಮ ಪೂಜೆ ಜರುಗಿತು. ಸಂಘದ ಅಧ್ಯಕ್ಷ ದಿನೇಶ್‌ ಆಚಾರ್ಯ ಅವರ ನೇತೃತ್ವದಲ್ಲಿ ವಿಶ್ವಕರ್ಮ ಯಜ್ಞ ನಡೆಯಿತು. ಬೈಲೂರು ವ್ಯಾಪ್ತಿಯ ಸಮಾಜಬಾಂಧವರು ಪೂಜೆಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಬೈಲೂರು ಸನತ್‌ ಆಚಾರ್ಯ ಇವರ ಸಾರಥ್ಯದಲ್ಲಿ ಅತಿಥಿ ಕಲಾವಿದರೊಂದಿಗೆ ಕೂಡಿ ಕಾರ್ಕಳ ಯಕ್ಷ ಸಾಂಗತ್ಯ ಮಿತ್ರಮಂಡಳಿಯವರಿಂದ ದಕ್ಷಯಜ್ಞ ಎಂಬ ಕಥಾನಕ ಭಾಗದ ಯಕ್ಷಗಾನ ನಡೆಯಿತು.

ಮಂಜರಪಲ್ಕೆ ಶ್ರೀ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದಲ್ಲಿ ವಿಶ್ವಕರ್ಮ ಪೂಜೆಯು ಜರುಗಿತು.









































































































error: Content is protected !!
Scroll to Top