ಚಿನ್ನದ ಮಳಿಗೆಗಳಲ್ಲಿ ಕಳ್ಳತನಕ್ಕೆ ಯತ್ನ – ಪ್ರಕರಣ ದಾಖಲು

ಕಾರ್ಕಳ : ಚಿನ್ನದ ಮಳಿಗೆಗಳಲ್ಲಿ ಕಳ್ಳತನಕ್ಕೆ ಯತ್ನಕ್ಕೆ ಪ್ರಯತ್ನಿಸಿರುವ ಘಟನೆ ಸೆ. 5ರ ರಾತ್ರಿ ಕಾರ್ಕಳದಲ್ಲಿ ನಡೆದಿದೆ. ನಗರದ ಮುಖ್ಯರಸ್ತೆಯಲ್ಲಿರುವ ಪ್ರಣವ್‌ ಜುವೆಲ್ಲರಿ ಮತ್ತು ಕರ್ನಾಟಕ ಜುವೆಲ್ಲರಿ ಎಂಬ ಚಿನ್ನದ ಮಳಿಗೆಗಳಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ. ಕಳ್ಳರು ಎರಡು ಅಂಗಡಿಗಳ ಶಟರ್‌, ಬಾಗಿಲುಗಳನ್ನು ಗ್ಯಾಸ್‌ ಕಟರ್‌ನಿಂದ ತುಂಡರಿಸಿ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ಸೆ. 6ರ ಮುಂಜಾನೆ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























































































































error: Content is protected !!
Scroll to Top