ದುಬೈನಲ್ಲಿ ಗಜಾನನ ಕ್ರಿಕೆಟರ್ಸ್‌ ತುಳು ಸಿನೆಮಾ ಆಡಿಯೋ ಲಾಂಚ್ – ಜನವರಿಯಲ್ಲಿ ಚಿತ್ರ ಬಿಡುಗಡೆ

ದುಬೈ : ಗಜಾನನ ಕ್ರಿಕೆಟರ್ಸ್‌ ತುಳು ಸಿನೆಮಾದ ಆಡಿಯೋ ಲಾಂಚ್‌ ಇತ್ತೀಚೆಗೆ ದುಬೈಯ ಟೀಕೋಮ್‌ ಫಿಶರ್‌ಮಾನ್ಸ್‌ ಹಬ್‌ ಹೊಟೇಲ್‌ನಲ್ಲಿ ನಡೆಯಿತು. ವಿಜಯ್‌ ಪ್ರಕಾಶ್‌ ಈ ಹಾಡು ಹಾಡಿದ್ದು, ಅವರಿಂದಲೇ ಲಾಂಚ್‌ ಮಾಡಿಸಲಾಯಿತು. ಅನಿವಾಸಿ ಭಾರತೀಯ ಬಿ.ಆರ್‌. ಶೆಟ್ಟಿ, ಸರ್ವೋತ್ತಮ ಶೆಟ್ಟಿ, ಜೇಮ್ಸ್‌ ಮೆಂಡೋನ್ಸ, ಪ್ರತಾಪ್‌ ಮೆಂಡೋನ್ಸ, ಸುದರ್ಶನ ಹೆಗ್ಡೆ, ಹರೀಶ್‌ ಶೇರಿಗಾರ್‌ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜ್ವಲ್‌ ಫಿಲಂಸ್‌ ಬ್ಯಾನರ್‌ನಡಿಯಲ್ಲಿ ನಿರ್ಮಾಣವಾಗುತ್ತಿರುವ ಗಜಾನನ ಕ್ರಿಕೆಟರ್ಸ್‌ ಚಿತ್ರಕ್ಕೆ ರೋಹನ್‌ ವಾಮಂಜೂರು ಮತ್ತು ಸಂತೋಷ್‌ ಲಾಡ್‌ ಸಹ ನಿರ್ಮಾಪಕರಾಗಿದ್ದಾರೆ. ಕೀರ್ತನ್‌ ಭಂಡಾರಿ ಸಿನೆಮಾ ನಿರ್ದೇಶಕರಾಗಿದ್ದು, ಸೃಜನ್‌ ಕುಮಾರ್‌ ತೋನ್ಸೆ ಸಂಗೀತ ನಿರ್ದೇಶಿಸಿದ್ದಾರೆ. ನ. 22ರಂದು ಯುಎಇ (UAE)ಯಲ್ಲಿ ಪ್ರೀಮಿಯರ್‌ ಶೋ ನಡೆಯಲಿದ್ದು, 2026 ಜನವರಿಯಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ.







































error: Content is protected !!
Scroll to Top