ಕಬ್ಬಿಣದ ರಾಡ್‌ನಿಂದ ಹಲ್ಲೆ – ವ್ಯಕ್ತಿ ಆಸ್ಪತ್ರೆ ದಾಖಲು

ಕಾರ್ಕಳ : ವ್ಯಕ್ತಿಯೋರ್ವರಿಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ ಪರಿಣಾಮ ಆಸ್ಪತ್ರೆ ದಾಖಲಾದ ಘಟನೆ ಆ. 18ರಂದು ಮಾಳ ಗ್ರಾಮದಲ್ಲಿ ಸಂಭವಿಸಿದೆ. ಸುಧಾಕರ ಶೆಟ್ಟಿ ಎಂಬವರು ಮಾಳ ಗ್ರಾಮದ ಮುಳ್ಳೂರು ಚೆಕ್‌ ಪೊಸ್ಟ್‌ ಬಳಿಯಿರುವ ಅಂಗಡಿಯಲ್ಲಿ ಮಾತಾನಾಡುತ್ತಿದ್ದಾಗ ಸುಧಾಕರ ಮೇರ ಎಂಬಾತ ಹಿಂದಿನಿಂದ ಬಂದು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದಿದ್ದಾನೆ. ಪರಿಣಾಮವಾಗಿ ಸುಧಾಕರ ಶೆಟ್ಟಿ ಅವರು ಗಾಯಗೊಂಡಿದ್ದು ಚಿಕಿತ್ಸೆಗಾಗಿ ನಿಟ್ಟೆ ಗಾರ್ಜಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.









































































































error: Content is protected !!
Scroll to Top