ಮಣಿಪಾಲ ಜ್ಞಾನಸುಧಾ ಸ್ವಾತಂತ್ರ್ಯೋತ್ಸವ

ದೇವ ಭಕ್ತಿಗೂ ದೇಶಭಕ್ತಿ ಮಿಗಿಲು – ಮುನಿರಾಜ ರೆಂಜಾಳ

ಉಡುಪಿ : ದೇವರ ಎದುರು ಕೈ ಮುಗಿದರೆ, ಆಕಾಶದೆತ್ತರಕ್ಕೆ ಹಾರುವ ತ್ರಿವರ್ಣ ಧ್ವಜಕ್ಕೆ ತಲೆ ಎತ್ತಿ ಸೆಲ್ಯೂಟ್ ಮಾಡುತ್ತೇವೆ. ಇದು ದೇವ ಭಕ್ತಿಗೂ ಮಿಗಿಲು ದೇಶಭಕ್ತಿ ಎಂಬುದನ್ನು ಸಾರುತ್ತದೆ ಎಂದು ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ಹೇಳಿದರು.
ಅವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಹಾಗೂ ಮಣಿಪಾಲ ಪ್ರಿ ಯುನಿವರ್ಸಿಟಿ ಕಾಲೇಜುಗಳ ಸಂಯಕ್ತ ಆಶ್ರಯದಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸ್ವಾತಂತ್ರ್ಯದ ನೆಲೆ ಬೆಲೆ ವಿಷಯದ ಕುರಿತು ಮಾತನಾಡಿದರು.

ಬದುಕಿ ಬದುಕಲುಬಿಡಿ
ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಬಲಿದಾನಿಗಳನ್ನು ಸ್ಮರಿಸುವ ಈ ದಿನದಂದು ದೇಶಕ್ಕಾಗಿ ಬದುಕುವ ದೃಢ ಸಂಕಲ್ಪ ಮಾಡಬೇಕಾಗಿದೆ. ದೇಶ ಪ್ರೇಮವನ್ನು ನಮ್ಮ ವ್ಯಕ್ತಿತ್ವ, ನಡವಳಿಕೆ, ಸಂಸ್ಕಾರಯುತ ಜೀವನ ಶೈಲಿಯ ಮೂಲಕ ತೋರ್ಪಡಿಸಬೇಕಾಗಿದೆ. ನಾವು ಬದುಕಬೇಕು ಮತ್ತು ಇತರರನ್ನು ಬದುಕಲು ಬಿಡಬೇಕು ಎಂಬ ಸರಳ ಸೂತ್ರವನ್ನು ಅಳವಡಿಸಿಕೊಳ್ಳುವುದು ಅವಶ್ಯವೆಂದರು.

ನಿನಗೆ ಯಾರು ಯಾವುದನ್ನು ಮಾಡಬಾರದು ಎಂದು ಬಯಸುತ್ತೀಯೋ ಅದನ್ನು ಯಾರಿಗೂ ನೀನೂ ಮಾಡಬೇಡ ಎಂಬ ತತ್ವವನ್ನು ಅರ್ಥಮಾಡಿಕೊಂಡು, ಸ್ವಾತಂತ್ರ್ಯವನ್ನು ಬಳಸಿ ನಾವು ಸುಖವಾಗಿರುವುದರೊಂದಿಗೆ ನಮ್ಮ ಸುತ್ತಲೂ ಇರುವವರನ್ನು ಸುಖವಾಗಿರಲು ಅನುವು ಮಾಡಿಕೊಡಬೇಕು ಎಂದು ಮುನಿರಾಜ ರೆಂಜಾಳ ಹೇಳಿದರು.
ಮಣಿಪಾಲ್ ಹೈಸ್ಕೂಲ್ ಟ್ರಸ್ಟ್‌ನ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಧ್ವಜಾರೋಹಣಗೈದರು. ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಅಜೆಕಾರ್ ಪದ್ಮ ಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಮಣಿಪಾಲ ಜ್ಞಾನಸುಧಾ ಪ್ರಾಂಶುಪಾಲ ಗಣೇಶ್ ಶೆಟ್ಟಿ, ಉಪಪ್ರಾಂಶುಪಾಲ ರವಿ ಜಿ., ಹೇಮಂತ ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

















































error: Content is protected !!
Scroll to Top