ಕಾರ್ಕಳ : ಲಾರಿ ಸೀಜ್ ಮಾಡಲು ಬಂದ ಫೈನಾನ್ಸ್ ಏಜೆಂಟ್‌ನವರು ಲಾರಿ ಚಾಲಕನಿಗೆ ಹಲ್ಲೆ ಮಾಡಿರುವ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೂಡಾ ಗ್ರಾಮದ ಓರಿಯಂಟಲ್ ಗ್ರಾನೈಟ್ ಎಂಬ ಹೆಸರಿನ ಕ್ರಷರ್‌ನಲ್ಲಿ ಆ. 12ರಂದು ರಾತ್ರಿ ಮಂಡ್ಯದ ರಂಗಸ್ವಾಮಿ ಎಂಬವರು ತಾವು ಚಲಾಯಿಸುತ್ತಿದ್ದ ಲಾರಿಯಲ್ಲಿ (KA-11-C-4167) ಮಲಗಿದ್ದಾಗ ಕಾರಿನಲ್ಲಿ ಬಂದ ಆಪಾದಿತರಾದ ಜಾಯ್ ಸನ್, ಗೋಪಾಲ, ಮಂಜುನಾಥ ಹಾಗೂ ಇತರ 3 ಜನರು ತಾವು ಫೈನಾನ್ಸ್ ಕಂಪೆನಿಯ ಏಜೆಂಟರು ಲಾರಿ ಸೀಜ್ ಮಾಡಲು ಬಂದಿದ್ದೇವೆ ಎಂದಿದ್ದಾರೆ. ಈ ವೇಳೆ ಲಾರಿಯನ್ನು ತೆಗೆದುಕೊಂಡು ಹೋಗಲು ರಂಗಸ್ವಾಮಿ ವಿರೋಧಿಸಿದಾಗ ಅವರನ್ನು ಆಪಾದಿತರು ಲಾರಿಯಿಂದ ಕೆಳಗೆ ಎಳೆದು ಅವಾಚ್ಯ ಶಬ್ದಗಳಿಂದ ಬೈಯ್ದು, ಲಾರಿಯ ಕೀಯನ್ನು ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಹಲ್ಲೆ ಮಾಡಿ ಲಾರಿಯನ್ನು ಒತ್ತಾಯಪೂರ್ವಕವಾಗಿ ತೆಗೆದುಕೊಂಡು ಹೋಗಿದ್ದಾರೆ. ಈ ಲಾರಿಯನ್ನು ಅದರ ಮಾಲಕ ಸಚಿನ್ ಹೆಚ್. ಎಸ್. ಅವರು ಟಾಟಾ ಫೈನಾನ್ಸ್‌ನಲ್ಲಿ ಸಾಲ ಮಾಡಿ ಖರೀದಿ ಮಾಡಿದ್ದು, ಫೈನಾನ್ಸ್ ಸಾಲ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವುದಾಗಿ ರಂಗಸ್ವಾಮಿ ಅವರು ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.






























































