ಕಾರ್ಕಳ : ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕ್ರೈಸ್ತ್ ಕಿಂಗ್ ವಿದ್ಯಾಸಂಸ್ಥೆಯ ಆತಿಥ್ಯದಲ್ಲಿ ಕಾರ್ಕಳ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ ಹಾಗೂ ಬಾಲಕಿಯರ ಕುಸ್ತಿ ಪಂದ್ಯಾಟ ಎಸ್ವಿಟಿ ವನಿತಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
40 ಕೆಜಿ ವಿಭಾಗದಲ್ಲಿ ಹತ್ತನೇ ತರಗತಿಯ ವಿಜಯ ಪ್ರಥಮ, 43 ಕೆಜಿ – 10ನೇ ತರಗತಿಯ ಕಸ್ತೂರಿ, 46 ಕೆಜಿ – 10ನೇ ತರಗತಿಯ ಸೌಮ್ಯ, 65 ಕೆಜಿ – 10ನೇ ತರಗತಿಯ ವಾಣಿ, 14ರ ವಯೋಮಾನದ ಸ್ಪರ್ಧೆಯಲ್ಲಿ 33 ಕೆಜಿ ವಿಭಾಗದಲ್ಲಿ 8ನೇ ತರಗತಿಯ ಚೈತ್ರ, 30 ಕೆಜಿ – 8ನೇ ತರಗತಿಯ ಉಮಾದೇವಿ, 36 ಕೆಜಿ – 8ನೇ ತರಗತಿಯ ಶ್ವೇತಾ, 46 ಕೆಜಿ – 8ನೇ ತರಗತಿಯ ರಂಜಿತಾ, 49 ಕೆಜಿ – 9ನೇ ತರಗತಿಯ ನಿರಂಜನ್ ಪ್ರಥಮ ಸ್ಥಾನಿಯಾನಿ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.
58 ಕೆಜಿ ವಿಭಾಗದಲ್ಲಿ 8ನೇ ತರಗತಿಯ ಸಮೀಕ್ಷಾ, 53 ಕೆಜಿ-10ನೇ ತರಗತಿಯ ಪೂಜಾ, 57 ಕೆಜಿ – 9ನೇ ತರಗತಿಯ ಧನ್ಯಶ್ರೀ, 49 ಕೆಜಿ- 10ನೇ ತರಗತಿಯ ಚೈತ್ರ, 30 ಕೆಜಿ – 8ನೇ ತರಗತಿಯ ನಿತಿನ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರಾದ ನೇಮಿರಾಜ ಶೆಟ್ಟಿ ಕೆ., ಮುಖ್ಯ ಶಿಕ್ಷಕ ಯೋಗೇಂದ್ರ ನಾಯಕ್, ದೈಹಿಕ ಶಿಕ್ಷಣ ಶಿಕ್ಷಕಿ ಪ್ರಿಯಾ ಪ್ರಭು, ತರಬೇತುದಾರೆ ಪ್ರಭಾವತಿ ಹೆಗ್ಡೆ, ತೀರ್ಪುಗಾರ ಅಕ್ಷತ್ ಹಾಗೂ ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿರುತ್ತಾರೆ.










































