ಕಾರ್ಕಳ : ತಾಲೂಕಿನಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು, ವಿವಿಧೆಡೆ ಹಾನಿ ಸಂಭವಿಸಿದೆ. ಕಲ್ಯಾ ಗ್ರಾಮದ ಪರಾಡಿಯ ಅಚ್ಯುತ ಎಂಬವರ ಮನೆ ಹಾಗೂ ದನದ ಕೊಟ್ಟಿಗೆಗೆ ಮರ ಬಿದ್ದು 30,000 ರೂ. ನಷ್ಟವಾಗಿರುತ್ತದೆ. ನಲ್ಲೂರು ಗ್ರಾಮದ ರಾಜೀವಿ ಶೆಟ್ಟಿ ಎಂಬವರ ಮನೆಗೆ ಹಾನಿಯಾಗಿದ್ದು 10,000 ರೂ. ನಷ್ಟ ಉಂಟಾಗಿದೆ. ರೆಂಜಾಳ ಗ್ರಾಮದ ಸುನೀತಾ ಎಂಬವರ ಮನೆಗೆ ಹಾನಿಯಾಗಿ 10,000 ರೂ. ನಷ್ಟ ಸಂಭವಿಸಿದೆ.






















