128 ವರ್ಷಗಳ ಬಳಿಕ ಒಲಿಂಪಿಕ್ಸ್​ ಕ್ರಿಕೆಟ್​ ಪಂದ್ಯಾವಳಿ – ದಿನಾಂಕ ನಿಗದಿ

ಮುಂಬೈ : 128 ವರ್ಷಗಳ ಬಳಿಕ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕ್ರಿಕೆಟ್‌ ಮರಳಿದ್ದು, ಅದರಂತೆ ಲಾಸ್ ಏಂಜಲೀಸ್​ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್ ಕ್ರಿಕೆಟ್ ಪಂದ್ಯಾಟದ ದಿನಾಂಕ ನಿಗದಿಯಾಗಿದೆ. ಈ ಪಂದ್ಯಾವಳಿಯು ಜುಲೈ 12 ರಿಂದ ಶುರುವಾಗಲಿದ್ದು, ಫೈನಲ್ ಪಂದ್ಯವು ಜುಲೈ 29 ರಂದು ನಡೆಯಲಿದೆ.

ಮೊದಲ ಹಂತದ ಕ್ರಿಕೆಟ್ ಪಂದ್ಯಗಳು ಜುಲೈ 12 ರಿಂದ 18 ರವರೆಗೆ ನಡೆಯಲಿದ್ದು, ಇದಾದ ನಂತರ ಜುಲೈ 22 ರಿಂದ 28 ರವರೆಗೆ ಎರಡನೇ ಹಂತದ ಮ್ಯಾಚ್​ಗಳು ನಡೆಯಲಿದೆ. ಇನ್ನು ಅಂತಿಮ ಪಂದ್ಯವು ಜುಲೈ 29 ರಂದು ಜರುಗಲಿದೆ.

ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಟಿ20 ಮಾದರಿಯಲ್ಲಿ ಆಯೋಜಿಸಲಾಗುತ್ತದೆ. ಹೀಗಾಗಿ ಐಸಿಸಿ ಟಿ20 ತಂಡಗಳ ಶ್ರೇಯಾಂಕಗಳ ಆಧಾರದ ಮೇಲೆ ತಂಡಗಳು ಅರ್ಹತೆ ಪಡೆಯಲಿವೆ. ಅಂದರೆ ಒಲಿಂಪಿಕ್ಸ್​ ಅರ್ಹತೆಗೆ ನಿಗದಿ ಮಾಡಲಾದ ಸಮಯದ ವೇಳೆ ಐಸಿಸಿ ತಂಡಗಳ ಶ್ರೇಯಾಂಕವನ್ನು ಪರಿಗಣಿಸಿ 6 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ಇನ್ನು ಲಾಸ್ ಏಂಜಲೀಸ್ ಒಲಿಂಪಿಕ್ಸ್​ಗೆ ಆತಿಥ್ಯವಹಿಸಲಿರುವ ಯುಎಸ್​ಎ ತಂಡಕ್ಕೂ ಕ್ರಿಕೆಟ್ ಟೂರ್ನಿಯಲ್ಲಿ ಅವಕಾಶ ನೀಡುವ ಸಾಧ್ಯತೆಯಿದೆ.

128 ವರ್ಷಗಳ ಬಳಿಕ ಕ್ರಿಕೆಟ್
1900 ರಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಒಮ್ಮೆ ಕ್ರಿಕೆಟ್ ಆಡಲಾಗಿತ್ತು. 128 ವರ್ಷಗಳ ಹಿಂದೆ ನಡೆದ ಈ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 185 ರನ್‌ಗಳಿಂದ ಸೋಲಿಸಿದ ಗ್ರೇಟ್ ಬ್ರಿಟನ್ ಚಿನ್ನದ ಪದಕ ಗೆದ್ದುಕೊಂಡಿತ್ತು. ಇದೀಗ 128 ವರ್ಷಗಳ ಬಳಿಕ ಮತ್ತೊಮ್ಮೆ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್ ಕಾದಾಟಕ್ಕೆ ಅವಕಾಶ ದೊರೆಯುತ್ತಿದೆ.







































error: Content is protected !!
Scroll to Top