ಆ. 3 : ಶಲ್ಯ ಸಾರಥ್ಯ ತಾಳ ಮದ್ದಳೆ

ಕಾರ್ಕಳ : ವಿ. ಕೆ. ಡೆಕೋರೇಟರ್ಸ್‌ ಕಾರ್ಕಳ ನೇತೃತ್ವದಲ್ಲಿ ಆ. 3ರಂದು ಮಧ್ಯಾಹ್ನ 2 ಗಂಟೆಗೆ ತೆಳ್ಳಾರು ರಸ್ತೆ ಕಸ್ತೂರಿ ರಂಗಮಂಟಪದಲ್ಲಿ ಶಲ್ಯ ಸಾರಥ್ಯ ಪ್ರಸಂಗದ ತಾಳಮದ್ದಳೆ ನಡೆಯಲಿದೆ.
ಹಿಮ್ಮೆಳದಲ್ಲಿ ಭಾಗವತರಾಗಿ ಬಲಿಪ ಶಿವ ಶಂಕರ್‌ ಭಟ್‌ ಹಾಗೂ ಸತ್ಯನಾರಾಯಣ ಪುಣಿಚಿತ್ತಾಯ, ಚೆಂಡೆಯಲ್ಲಿ ರವಿರಾಜ್‌ ಜೈನ್‌ ಕಾರ್ಕಳ, ಮದ್ದಳೆಯಲ್ಲಿ ಚಂದ್ರಶೇಖರ್‌ ಭಟ್‌ ಕೊಂಕಣಾಜೆ, ಅರ್ಥದಾರಿಗಳಾಗಿ ಜಬ್ಬರ್‌ ಸಮೋ, ಪವನ್‌ ಕಿರಣ್‌ ಕೆರೆ, ಸದಾಶಿವ ಆಳ್ವ ತಲಪಾಡಿ, ದಿನೇಶ್‌ ಶೆಟ್ಟಿ ಕಾವಳಕಟ್ಟೆ, ಶಶಿಕಾಂತ ಶೆಟ್ಟಿ ಕಾರ್ಕಳ ಹಾಗೂ ಗೋಪಾಲಕೃಷ್ಣ ಗೋರೆ ಕಾರ್ಕಳ ಇರಲಿದ್ದು, ಗೋಪಾಲಕೃಷ್ಣ ಗೋರೆ ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







































error: Content is protected !!
Scroll to Top