ವಿನಯ್ ಗುರೂಜಿಗೆ ಧರ್ಮಯೋಗಿ ಮೋಹನ್ ಸಮ್ಮಾನ

ಹೆಬ್ರಿ : ನಾಟ್ಕದೂರು ಮುದ್ರಾಡಿ ಶ್ರೀ ಕ್ಷೇತ್ರ ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಮತ್ತು ನಂದಿಕೇಶ್ವರ ದೇವಸ್ಥಾನದಲ್ಲಿ ಜು. 8ರಂದು ಧರ್ಮಯೋಗಿ ಮೋಹನ ಸ್ವಾಮೀಜಿಯವರ 4ನೇ ವರ್ಷದ ಆರಾಧನಾ ಮಹೋತ್ಸವ ನಡೆಯಿತು. ಆರಾಧನಾ ಮಹೋತ್ಸವದಲ್ಲಿ ಮೋಹನ್ ಸ್ವಾಮೀಜಿ ಅವರ ಸಂಸ್ಮರಣೆಗಾಗಿ ನೀಡುವ ಧರ್ಮಯೋಗಿ ಸಮ್ಮಾನ ಗೌರವವನ್ನು ಈ ಬಾರಿ ಗೌರಿಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಅವರಿಗೆ ಪ್ರದಾನ ಮಾಡಲಾಯಿತು.

ಚಿಕ್ಕಮಗಳೂರಿನ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿತು. ಶ್ರೀ ಆದಿಶಕ್ತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಪಟ್ಲ ಸತೀಶ ಶೆಟ್ಟಿ ಬಳಗದಿಂದ ಯಕ್ಷಗಾನ ತಾಳಮದ್ದಳೆ ‘ಅಂಗದ ಸಂಧಾನ’ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಜಗೋಳಿ ರವೀಂದ್ರ ಶೆಟ್ಟಿ ವಹಿಸಿದ್ದರು. ಮುದ್ರಾಡಿಯ ಕಮಲ ಎಂಪಿ, ಮಾಜಿ ಜಿಪಂ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ, ದೇವಸ್ಥಾನದ ಧರ್ಮಾಧಿಕಾರಿ ವಿಜಯಕೀರ್ತಿ ಸುಕುಮಾರ್‌ ಮೋಹನ್‌, ಧರ್ಮದರ್ಶಿಗಳಾದ ಸುಧೀಂದ್ರ ಮೋಹನ್‌, ಸುರೇಂದ್ರ ಮೋಹನ್‌ ಹಾಗೂ ಉಮೇಶ್‌ ಕಲ್ಮಾಡಿ ಉಪಸ್ಥಿತರಿದ್ದರು. ಜಗದೀಶ ಜಾಲ ಕಾರ್ಯಕ್ರಮ ನಿರ್ವಹಿಸಿದರು.









































































































error: Content is protected !!
Scroll to Top