ಆಕ್ಸಿಯಮ್‌- 4 ಮಿಷನ್‌ ಯಶಸ್ವಿ ಉಡಾವಣೆ

ಫ್ಲೋರಿಡಾ : ಅನೇಕ ವಿಳಂಬಗಳ ಬಳಿಕ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರನ್ನು ಹೊತ್ತ ಆಕ್ಸಿಯಮ್ -4 ಮಿಷನ್ ಇಂದು ಮಧ್ಯಾಹ್ನ 12.01ಕ್ಕೆ ಅಮೆರಿಕದ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಡೆಗೆ ಯಶಸ್ವಿಯಾಗಿ ಚಿಮ್ಮಿದೆ.

ಇಸ್ರೋ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿಬೊರ್ ಕಾಪು, ಪೋಲೆಂಡ್‌ನ ಸ್ಲಾವೋಜ್ ವಿಸ್‌ನೀವ್‌ವಿಸ್ಕಿ ಬಾಹ್ಯಾಕಾಶಕ್ಕೆ ತಮ್ಮ ಪ್ರಯಾಣವನ್ನು ಆರಂಭಿಸಿದ್ದಾರೆ.

ಇಂದು ಮಧ್ಯಾಹ್ನದಿಂದ 28 ಗಂಟೆಗಳ ಪ್ರಯಾಣದ ನಂತರ ಬಾಹ್ಯಾಕಾಶ ನೌಕೆ ನಾಳೆ ಸಂಜೆ 4:30 ಸುಮಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣನೊಂದಿಗೆ ಡಾಕ್ ಆಗುವ ನಿರೀಕ್ಷೆಯಿದೆ. ಗಗನಯಾತ್ರಿಗಳು ಬಾಹ್ಯಾಕಾಶ ನೌಕೆ ನಿಲ್ದಾಣದಲ್ಲಿ ಸುಮಾರು 14 ದಿನಗಳನ್ನು ಕಳೆಯಲಿದ್ದಾರೆ. ನಾಸಾದ ಮಾಜಿ ಗಗನಯಾತ್ರಿ ಮತ್ತು ಆಕ್ಸಿಯಮ್ ಸ್ಪೇಸ್‌ನಲ್ಲಿ ಮಾನವ ಬಾಹ್ಯಾಕಾಶ ಹಾರಾಟದ ನಿರ್ದೇಶಕಿ ಪೆಗ್ಗಿ ವಿಟ್ಸನ್ ಈ ವಾಣಿಜ್ಯ ಕಾರ್ಯಾಚರಣೆಯನ್ನು ಮುನ್ನಡೆಸಿದ್ದಾರೆ. ಇಸ್ರೋ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಗಗನಯಾತ್ರಿ ಶುಭಾನ್ಶು ಶುಕ್ಲಾ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಇದೊಂದು ಅದ್ಭುತ ಪಯಣ – ಶುಕ್ಲಾ ಮೊದಲ ಸಂದೇಶ
ಜೂ. 25ರಂದು ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಭಾರತ ಮೂಲದ ಖಗೋಳ ಯಾತ್ರಿಕ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶ ಪಯಣದ ಮಾರ್ಗ ಮಧ್ಯೆಯೇ ನಾಸಾ ಕಂಟ್ರೋಲ್ ರೂಮಿಗೆ ಸಂದೇಶ ರವಾನಿಸಿದ್ದಾರೆ. ನಾಸಾ ನಿಯಂತ್ರಣ ಕೇಂದ್ರದಲ್ಲಿ ಕುಳಿತಿರುವ ವಿಜ್ಞಾನಿಗಳು, ಸ್ಪೇಸ್ ಎಕ್ಸ್ ರಾಕೆಟ್‌ನಲ್ಲಿರುವ ಶುಕ್ಲಾ ಹಾಗೂ ಇತರ ವಿಜ್ಞಾನಿಗಳನ್ನು ಮಾತನಾಡಿಸಿದ್ದಾರೆ. ಅವರ ಯೋಗ ಕ್ಷೇಮ ವಿಚಾರಿಸಿದ್ದಾರೆ. ಅದಕ್ಕೆ ಉತ್ತರಿಸಿದ ಶುಕ್ಲಾ, ಇದೊಂದು ಅದ್ಭುತ ಪಯಣ ಎಂದಿದ್ದಾರೆ.







































error: Content is protected !!
Scroll to Top