ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಬೈಕ್‌ ಡಿಕ್ಕಿ – ಆಸ್ಪತ್ರೆ ದಾಖಲು

ಕಾರ್ಕಳ : ರಸ್ತೆ ಬದಿ ನಿಂತಿದ್ದ ವ್ಯಕ್ತಿಯೋರ್ವರಿಗೆ ಬೈಕ್‌ ಡಿಕ್ಕಿಯಾಗಿ ಆಸ್ಪತ್ರೆ ದಾಖಲಾದ ಘಟನೆ ಜೂ. 7ರಂದು ಮುಡಾರಿನಲ್ಲಿ ಸಂಭವಿಸಿದೆ. ಮುಡಾರು ಗ್ರಾಮದ ಸುರೇಂದ್ರ ಎಂಬವರು ರಾತ್ರಿ 8.30ಕ್ಕೆ ಆಟೋ ರಿಕ್ಷಾದಿಂದ ಇಳಿದು ರಸ್ತೆ ಬದಿ ನಿಂತಿದ್ದಾಗ ಕೆರ್ವಾಶೆ ಕಡೆಗೆ ವಿಶ್ವನಂದನ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್‌ ಡಿಕ್ಕಿಯಾಗಿದೆ. ಪರಿಣಾಮವಾಗಿ ಸುರೇಂದ್ರ ಅವರು ಗಾಯಗೊಂಡಿದ್ದು ಗಾಜ್ರಿಯಾ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಅಪಘಾತದಿಂದಾಗಿ ಬೈಕ್‌ ಸವಾರನೂ ಬೈಕ್‌ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾನೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.















































































error: Content is protected !!
Scroll to Top