ಬೈಕ್‌ಗೆ ಆಂಬ್ಯುಲೆನ್ಸ್ ಡಿಕ್ಕಿ – ಸವಾರರಿಗೆ ಗಾಯ

ಕಾರ್ಕಳ : ಬೈಕ್‌ಗೆ ಆಂಬ್ಯುಲೆನ್ಸ್ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಜೂ. 4ರಂದು ನಿಟ್ಟೆ ಗ್ರಾಮದಲ್ಲಿ ಸಂಭವಿಸಿದೆ. ನಿಟ್ಟೆ ಗ್ರಾಮದ ದೇವದಾಸ್ ಎಂಬವರು ಪತ್ನಿ ಸುಮಂಗಳ ಅವರೊಂದಿಗೆ ಪಡುಬಿದ್ರೆ – ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ನಿಟ್ಟೆ ಎಂಬಲ್ಲಿ ಗಜೇಂದ್ರ ಎಂಬವರು ತನ್ನ ಒಮ್ನಿ ಆಂಬ್ಯುಲೆನ್ಸ್ (KA-25-C-5216) ವಾಹನದಲ್ಲಿ ಅತ್ತೂರು ಚರ್ಚ್ ಕಡೆಯಿಂದ ಬರುತ್ತಿರುವಾಗ ದೂಪದಕಟ್ಟೆ ಜಂಕ್ಷನ್‌ನಲ್ಲಿರುವ ವೃತ್ತವನ್ನು ಬಳಸದೇ ವಿರುದ್ಧ ದಿಕ್ಕಿನಿಂದ ಚಲಾಯಿಸಿರುತ್ತಾರೆ. ಆಗ ದೇವದಾಸ್‌ ಅವರ ಬೈಕ್‌ಗೆ ಓಮ್ನಿ ಡಿಕ್ಕಿ ಹೊಡೆದಿದ್ದು, ಪರಿಣಾಮ ಬೈಕ್‌ ಸಮೇತ ಸವಾರರಿಬ್ಬರೂ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಅಪಘಾತಕ್ಕೆ ಓಮ್ನಿ ಹಾಗೂ ಬೈಕ್‌ ಜಖಂಗೊಂಡಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























































































































error: Content is protected !!
Scroll to Top