ಕಾರ್ಕಳ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಹಾಗೂ ವಿವಿಧ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದ ಎಂಇಟಿ (MET) ಪರೀಕ್ಷೆಯಲ್ಲಿ ಕಾರ್ಕಳದ ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನ 19 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ.
ಸಿದ್ದಾರ್ಥ ಕಾಮತ್ ಅಲೈಡ್ ಹೆಲ್ತ್ ಸೈನ್ಸ್ ವಿಭಾಗದಲ್ಲಿ 3ನೇ ಮತ್ತು ಬಿ. ಟೆಕ್ ವಿಭಾಗದಲ್ಲಿ 65ನೇ ರ್‍ಯಾಂಕ್, ಅಮೂಲ್ಯ ಅಲೈಡ್ ಹೆಲ್ತ್ ಸೈನ್ಸ್‌ನಲ್ಲಿ 5ನೇ ರ್‍ಯಾಂಕ್, ಪ್ರತೀಕ್ಷ ಪ್ರಭು ಬಿ.ಟೆಕ್ ವಿಭಾಗದಲ್ಲಿ 11 ರ್‍ಯಾಂಕ್. ಕೆ. ಎನ್. ಇಂಚರ ಅಲೈಡ್ ಹೆಲ್ತ್ ಸೈನ್ಸ್‌ನಲ್ಲಿ 13ನೇ ರ್‍ಯಾಂಕ್, ನಿರೀಕ್ಷ ಕೆ.ಐ. ಅಲೈಡ್ ಹೆಲ್ತ್ ಸೈನ್ಸ್‌ನಲ್ಲಿ 18ನೇ ರ್‍ಯಾಂಕ್, ಶೋಭಿತ್ ಕುಮಾರ್ ಅಲೈಡ್ ಹೆಲ್ತ್ ಸೈನ್ಸ್‌ನಲ್ಲಿ 26ನೇ ಮತ್ತು ಬಿ. ಟೆಕ್‌ನಲ್ಲಿ 145ನೇ ರ್‍ಯಾಂಕ್, ಕೀರ್ತನ ಬಿ. ಟೆಕ್‌ನಲ್ಲಿ 29ನೇ ರ್‍ಯಾಂಕ್, ಆರ್. ಸಾನ್ವಿ ಸಾಲಿಯಾನ್ ಅಲೈಡ್ ಹೆಲ್ತ್ ಸೈನ್ಸ್‌ನಲ್ಲಿ 36ನೇ ರ್‍ಯಾಂಕ್, ಪ್ರಭಂಜನ್ ಜೋಶಿ ಬಿ.ಟೆಕ್‌ನಲ್ಲಿ 38ನೇ ರ್‍ಯಾಂಕ್, ವರ್ಷ ಅಲೈಡ್ ಹೆಲ್ತ್ ಸೆನ್ಸ್‌ನಲ್ಲಿ 43ನೇ ರ್‍ಯಾಂಕ್, ಪುಷ್ಪಲತಾ ಬಿ.ಟೆಕ್‌ನಲ್ಲಿ 66ನೇ ರ್‍ಯಾಂಕ್, ಪದ್ಮನಾಭ ಕಾಮತ್ ಬಿ.ಟೆಕ್‌ನಲ್ಲಿ 79ನೇ ರ್‍ಯಾಂಕ್, ಕ್ಷಿತಿ ಬಿ.ಟೆಕ್‌ನಲ್ಲಿ 117ನೇ ರ್‍ಯಾಂಕ್, ವಂದನ ಸಿ. ಬಿ.ಟೆಕ್‌ನಲ್ಲಿ 142ನೇ ರ್‍ಯಾಂಕ್, ಇಂಚರ ಎಚ್. ಎಸ್. ಬಿ.ಟೆಕ್‌ನಲ್ಲಿ 162ನೇ ರ್‍ಯಾಂಕ್, ಅತ್ರಿಯ ಮಲ್ಯ ಬಿ.ಟೆಕ್‌ನಲ್ಲಿ 197ನೇ ರ್‍ಯಾಂಕ್, ಮನೀಷಾ ತಾಪ ಅಲೈಡ್ ಹೆಲ್ತ್ ಸೈನ್ಸ್‌ನಲ್ಲಿ 29ನೇ ರ್‍ಯಾಂಕ್, ದೀಪ್ತಿ ಅಲೈಡ್ ಹೆಲ್ತ್ ಸೈನ್ಸ್‌ನಲ್ಲಿ 105ನೇ ರ್‍ಯಾಂಕ್ ಹಾಗೂ ಸೃಷ್ಟಿ ಪಿ. ಶೆಟ್ಟಿ ಬಿ.ಟೆಕ್‌ನಲ್ಲಿ 129ನೇ ರ್‍ಯಾಂಕನ್ನು ಪಡೆದಿರುತ್ತಾರೆ.
ಈ ಎಲ್ಲಾ ವಿದ್ಯಾರ್ಥಿಗಳು SAGES ಯೋಜನೆಯಡಿಯಲ್ಲಿ ಅರ್ಹತೆ ಪಡೆದು ಎಂಐಟಿ ಹಾಗೂ ಇತರ ಎಲ್ಲಾ ವಿಭಾಗಗಳ ಸಂಬಂಧಪಟ್ಟ ಕೋರ್ಸ್‌ಗಳಲ್ಲಿ ಶೇಕಡಾ 10 ರಿಂದ 75% ಶುಲ್ಕ ವಿನಾಯತಿಯನ್ನು ಪಡೆಯಲಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸ ಮತ್ತು ಉಪನ್ಯಾಸಕೇತರ ವರ್ಗದವರು ಅಭಿನಂದಿಸಿದ್ದಾರೆ.






















