ಜೆ.ಇ.ಇ ಅಡ್ವಾನ್ಸ್ಡ್‌- 2025 : ಜ್ಞಾನಸುಧಾದ ಫಲಿತಾಂಶ

ಕಾರ್ಕಳ : ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಪ್ರವೇಶಾತಿಗಾಗಿ ನಡೆಸಲಾಗುವ ಜೆ.ಇ.ಇ. ಅಡ್ವಾನ್ಸ್ಡ್‌ 2025ರ ಪರೀಕ್ಷಾ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಐವರು ವಿದ್ಯಾರ್ಥಿಗಳು ಹತ್ತು ಸಾವಿರದೊಳಗಿನ ರ‍್ಯಾಂಕ್ ಗಳಿಸಿದ್ದಾರೆ.
ಕೆ.ಸಿ.ಇ.ಟಿ. ಇಂಜಿನಿಯರಿಂಗ್‌ನಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದ ತರುಣ್ ಎ. ಸುರಾನಾ ಜನರಲ್ ಮೆರಿಟ್‌ನಲ್ಲಿ 2403 ರ‍್ಯಾಂಕ್ (ಕೆಟಗರಿಯಲ್ಲಿ 429ರ‍್ಯಾಂಕ್), ಮನೋಜ್‌ ಕಾಮತ್ (3911) (ಜನರಲ್‌ ಇ.ಡಬ್ಲು.ಎಸ್ 394ರ‍್ಯಾಂಕ್), ಆಕಾಶ್ ಪ್ರಭು (5105), ಚಿಂತನ್ ಮೇಗಾವತ್ (6375) (ಕೆಟಗರಿಯಲ್ಲ್ಲಿ 142 ರ‍್ಯಾಂಕ್), ವಿಷ್ಣು ಧರ್ಮಪ್ರಕಾಶ್ (8565) ರ‍್ಯಾಂಕ್ ಗಳಿಸಿದ್ದಾರೆ. ಒಟ್ಟು ಹನ್ನೆರಡು ವಿದ್ಯಾರ್ಥಿಗಳು ಐ.ಐ.ಟಿ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.









































































































error: Content is protected !!
Scroll to Top