ಜೆ.ಇ.ಇ ಅಡ್ವಾನ್ಸ್ಡ್‌ – ಕ್ರಿಯೇಟಿವ್ ಕಾಲೇಜು ಫಲಿತಾಂಶ

ಕಾರ್ಕಳ : ದೇಶದ ಪ್ರತಿಷ್ಠಿತ IIT, IIST, IISc ನಂತಹ ಸಂಸ್ಥೆಗಳಲ್ಲಿ ಬಿ.ಟೆಕ್ (B.Tech) ಪದವಿ ಪ್ರವೇಶಕ್ಕೆ ನಡೆಯುವ ರಾಷ್ಟ್ರ ಮಟ್ಟದ ಜೆ.ಇ.ಇ (JEE) ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನ ಮೂವರು ವಿದ್ಯಾರ್ಥಿಗಳು ಸಾಮಾನ್ಯ ವಿಭಾಗದಲ್ಲಿ ಹತ್ತು ಸಾವಿರದೊಳಗೆ ರ‍್ಯಾಂಕ್ ಪಡೆದಿದ್ದಾರೆ.

ಚೇತನ್ ಗೌಡ ಎನ್. ಎಸ್. ಸಾಮಾನ್ಯ ವಿಭಾಗದಲ್ಲಿ 3420 (OBC ವರ್ಗದಲ್ಲಿ 639ನೇ ರ‍್ಯಾಂಕ್), ತೇಜಸ್ ವಿ. ನಾಯಕ್ ಸಾಮಾನ್ಯ ವಿಭಾಗದಲ್ಲಿ 7773 (OBC ವರ್ಗದಲ್ಲಿ 1661ನೇ ರ‍್ಯಾಂಕ್), ಸಾನಿಕ ಕೆ. ಎನ್. ಸಾಮಾನ್ಯ ವಿಭಾಗದಲ್ಲಿ 9701, ಮೋಹಿತ್ ಎಂ. ಸಾಮಾನ್ಯ (17504) (ST ವರ್ಗದಲ್ಲಿ 143ನೇ ರ‍್ಯಾಂಕ್) ಎಂ. ಮಂಜುನಾಥ್ ಸಾಮಾನ್ಯ ವಿಭಾಗದಲ್ಲಿ 20743ನೇ ರ‍್ಯಾಂಕ್, ಸಾಚಿ ಶಿವಕುಮಾರ್ ಕಡಿ (24728), ಶ್ರೀರಕ್ಷಾ (28163), ಯೋಗೇಶ್ ದೀಪಕ್ ನಾಯಕ್ ಸಾಮಾನ್ಯ ವಿಭಾಗದಲ್ಲಿ (31133) (OBC ವರ್ಗದಲ್ಲಿ 8989ನೇ ರ‍್ಯಾಂಕ್), ಹರ್ಷಿತ್ ರಾಜು ಹೆಚ್. ಎಂ. (31140), ಪ್ರೀತಿ ಸಿ. ಎಲ್. (31939) (OBC ವರ್ಗದಲ್ಲಿ 9271ನೇ ರ‍್ಯಾಂಕ್), ಟಿ. ಪ್ರದೀಪ್ ST ವರ್ಗದಲ್ಲಿ 409ನೇ ರ‍್ಯಾಂಕ್, ಮೋನಿಕಾ ಕೆ. ಪಿ. ST ವರ್ಗದಲ್ಲಿ 411ನೇ ರ‍್ಯಾಂಕ್ ಮತ್ತು ಪ್ರಜ್ವಲ್ ಡಿ. ಎಂ. SC ವರ್ಗದಲ್ಲಿ 5429ನೇ ರ‍್ಯಾಂಕ್ ತಮ್ಮದಾಗಿಸಿಕೊಂಡು ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕೆ ನಡೆಯುವ ಆಯ್ಕೆ ಪ್ರಕ್ರಿಯೆಗೆ ಅರ್ಹರಾಗಿದ್ದಾರೆ.

ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ವರ್ಗದವರು ಹಾಗೂ ಜೆ.ಇ.ಇ ಅಡ್ವಾನ್ಸ್ ಪರೀಕ್ಷೆಯ ಸಂಯೋಜಕರಾದ ತಿರುಮಲ ರೆಡ್ಡಿ ಅವರು ಅಭಿನಂದಿಸಿದ್ದಾರೆ.









































































































error: Content is protected !!
Scroll to Top