ಐಪಿಎಲ್‌ : ನಾಳೆ ಆರ್‌ಸಿಬಿ – ಪಂಜಾಬ್‌ ಕಿಂಗ್ಸ್‌ ಫೈನಲ್‌

ಬೆಂಗಳೂರು : ಐಪಿಎಲ್‌ 2025 ತನ್ನ ಅಂತಿಮ ಘಟ್ಟವನ್ನು ತಲುಪಿದೆ. ಜೂ. 1ರಂದು ಅಹಮದಾಬಾದ್‌ನಲ್ಲಿ ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್‌) ತಂಡವು, ಹಾರ್ದಿಕ್‌ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್‌ (ಎಂಐ) ತಂಡಕ್ಕೆ ಸೋಲುಣಿಸುವ ಮೂಲಕ ಫೈನಲ್‌ ಪ್ರವೇಶಿಸಿದೆ.

ಈಗಾಗಲೇ ಫೈನಲ್‌ ಏರಿ ಕುಳಿತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಪಿಬಿಕೆಎಸ್‌ ನಾಳೆ (ಜೂನ್‌ 3) ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎದುರಿಸಲಿದೆ. 2016ರ ನಂತರ ಮೊದಲ ಬಾರಿಗೆ ಇದುವರೆಗೂ ಐಪಿಎಲ್‌ನಲ್ಲಿ ಒಮ್ಮೆಯೂ ಕಪ್‌ ಗೆಲ್ಲದ ಎರಡು ತಂಡಗಳು ಫೈನಲ್‌ ತಲುಪಿದ್ದು, ಯಾವ ತಂಡ ಗೆದ್ದರೂ ಇದೇ ಮೊದಲ ಬಾರಿಗೆ ಕಪ್‌ ಎತ್ತಿ ಹಿಡಿಯುವ ಅವಕಾಶ ಪಡೆಯಲಿದೆ.

ಆರ್‌ಸಿಬಿ
ಆರ್‌ಸಿಬಿ ಐಪಿಎಲ್‌ ಇತಿಹಾಸದಲ್ಲಿ ಒಟ್ಟು ಮೂರು ಬಾರಿ ಫೈನಲ್‌ ಹಂತವನ್ನು ಪ್ರವೇಶಿಸಿದೆ. ಆದರೆ ಒಮ್ಮೆಯೂ ಫೈನಲ್‌ ಪಂದ್ಯವನ್ನು ಗೆದ್ದು ಟ್ರೋಫಿ ಎತ್ತಿ ಹಿಡಿಯುವಲ್ಲಿ ಅದು ವಿಫಲವಾಗಿದೆ.

2009- ಡೆಕ್ಕನ್‌ ಚಾರ್ಜರ್ಸ್‌ ವಿರುದ್ಧ
ಡೆಕ್ಕನ್‌ ಚಾರ್ಜರ್ಸ್‌ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಆರ್‌ಸಿಬಿ ನಿಗದಿತ 20 ಓವರ್‌ನಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 137 ರನ್‌ ಗಳಿಸಲಷ್ಟೇ ಶಕ್ತವಾಯಿತು.

2011- ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ
ಚೆನ್ನೈ ಸೂಪರ್‌ ಕಿಂಗ್ಸ್‌ ನಿಗದಿತ 20 ಓವರ್‌ನಲ್ಲಿ 5 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಆರ್‌ಸಿಬಿ ನಿಗದಿತ 20 ಓವರ್‌ನಲ್ಲಿ 8 ವಿಕೆಟ್‌ ಕಳೆದುಕೊಂಡು ಕೇವಲ 147 ರನ್‌ ಗಳಿಸಲಷ್ಟೇ ಶಕ್ತವಾಯಿತು.

2016-ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ
ಸನ್‌ ರೈಸರ್ಸ್‌ ಹೈದರಾಬಾದ್‌ ತಂಡ ನಿಗದಿತ 20 ಓವರ್‌ನಲ್ಲಿ 7 ವಿಕೆಟ್‌ ನಷ್ಟಕ್ಕೆ 208 ರನ್‌ಗಳನ್ನು ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಆರ್‌ಸಿಬಿ ನಿಗದಿತ 20 ಓವರ್‌ನಲ್ಲಿ 8 ವಿಕೆಟ್‌ ಕಳೆದುಕೊಂಡು ಕೇವಲ 200 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಆರ್‌ಸಿಬಿ ಮೇಲಿನ ಈ ಮೂರೂ ಪಂದ್ಯಗಳಲ್ಲಿ ರನ್ನರ ಅಪ್‌ ಆಗಿ ತೃಪ್ತಿಪಟ್ಟುಕೊಂಡಿತ್ತು. ಈಗ ತಂಡವು ನಾಲ್ಕನೇ ಬಾರಿ ಫೈನಲ್‌ ಪ್ರವೇಶಿಸಿದ್ದು, ಈ ಬಾರಿ ಆರ್‌ಸಿಬಿ ಮೊದಲ ಸಲ ಕಪ್‌ ಗೆಲ್ಲುವ ಭರವಸೆ ಹೊಂದಿದೆ.

ಪಿಬಿಕೆಎಸ್
ಪಿಬಿಕೆಎಸ್‌ ತಂಡ ಕೇವಲ ಒಮ್ಮೆ ಮಾತ್ರ ಐಪಿಎಲ್‌ ಫೈನಲ್‌ ಹಂತವನ್ನು ತಲುಪಿದೆ. ಆಗ ಈ ತಂಡದ ಹೆಸರು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಎಂದು ಇತ್ತು.
2014- ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ
ಈ ಪಂದ್ಯದಲ್ಲಿ ಆಗ ಕಿಂಗ್‌ ಇಲೆವನ್‌ ಪಂಜಾಬ್‌ ತಂಡ ನಿಗದಿತ 20 ಓವರ್‌ಲ್ಲಿ 4 ವಿಕೆಟ್‌ ನಷ್ಟಕ್ಕೆ 199 ರನ್‌ ಗಳಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಕೆಕೆಆರ್‌ ನಿಗದಿತ 20 ಓವರ್‌ನಲ್ಲಿ 7 ವಿಕೆಟ್‌ ನಷ್ಟಕ್ಕೆ 200 ರನ್‌ ಗಳಿಸಿ ಗೆಲುವು ಪಡೆದಿತ್ತು.



































































































error: Content is protected !!
Scroll to Top