ಕಾರ್ಕಳ : ಏಪ್ರಿಲ್ 7ರಂದು ಮುಂಡ್ಕೂರು ಗ್ರಾಮದ ರಮೇಶ್ (67) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಸಂಬಂಧ ಇದೀಗ ಹೊಟೇಲ್ ಮಾಲಕರ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ರಮೇಶ್ ಅವರು ಸಚ್ಚರಿಪೇಟೆಯಲ್ಲಿರುವ ಸುರೇಶ್ ಅವರ ಮಾಲಕತ್ವದ ನ್ಯು ಸಾಯಿ ಕೃಪ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಸುರೇಶ್ ಅವರು ತನ್ನ ತಂದೆಯನ್ನು 56ದಿನ ದುಡಿಸಿ ಸಂಬಳ ನೀಡದೆ, ಸಂಬಳ ಕೇಳಿದಾಗ ಅವರ ಕಾಲರ್ ಹಿಡಿದು ಕೆನ್ನೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಅವರನ್ನು ದೂಡಿಹಾಕಿ ಎಲ್ಲರ ಎದುರಿಗೆ ಅವಮಾನ ಮಾಡಿದ್ದಾರೆ. ಈ ಅವಮಾನವನ್ನು ತಡೆಯಲಾಗದೆ ತನ್ನ ತಂದೆ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಆತ್ಮಹತ್ಯೆಗೆ ಸುರೇಶ್ ಅವರೇ ನೇರ ಕಾರಣ ಎಂದು ಶರತ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ
ಮುಂಡ್ಕೂರು ರಮೇಶ್ ಆತ್ಮಹತ್ಯೆ ಪ್ರಕರಣ – ಹೊಟೇಲ್ ಮಾಲಕನ ವಿರುದ್ಧ ಮಗನಿಂದ ದೂರು

































