ಕಾರ್ಕಳ : ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ ವತಿಯಿಂದ ಪದವಿ ಪೂರ್ವ ತರಗತಿಗಳಲ್ಲಿ ಕಲಿಯುತ್ತಿರುವ ಕಾರ್ಕಳ ತಾಲೂಕಿನ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ ಮತ್ತು ದ್ವಿತೀಯ ಪಿಯುಸಿಯಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದು, ಶೇ. 60ಕ್ಕಿಂತ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ದತ್ತಿನಿಧಿ 2025
2024-25ನೇ ಶೈಕ್ಷಣಿಕ ಸಾಲಿನ ಎಸ್ಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಪಡೆದಿರುವ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಂದ ನಗದು ಪುರಸ್ಕಾರ ಹಾಗೂ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಹಸ್ತಾಕ್ಷರದಲ್ಲಿದ್ದು, ವಿದ್ಯಾರ್ಥಿಗಳು ಓದುತ್ತಿರುವ ಕಾಲೇಜು, ತರಗತಿ, ಮನೆಯ ವಿಳಾಸ, ದೃಢೀಕೃತ ಅಂಕಪಟ್ಟಿ, ಕಾಲೇಜು ಪ್ರಾಂಶುಪಾಲರ ದೃಢೀಕರಣ ಹಾಗೂ ಕೂಡುವಳಿಕೆಯ ಮೊಕ್ತೇಸರ ಅಥವಾ ಸಮಾಜ ಸಂಘ ಸಂಸ್ಥೆಯ ಅಧ್ಯಕ್ಷರ ದೃಢೀಕರಣವನ್ನು ಹೊಂದಿರಬೇಕು.

ಅರ್ಜಿಯನ್ನು ವಿ.ಬಿ.ಎಸ್ ಸಭಾ ಪೆರ್ವಾಜೆಯ ಪದ್ಮನಾಭ ಆಚಾರ್ಯ ಅಥವಾ ರಮೇಶ್ ಆಚಾರ್ಯ (9844995533) ಮನು ಜ್ಯುವೆಲ್ಲರ್ಸ್ ಸಪ್ತಗಿರಿ ಕಾಂಪ್ಲೆಕ್ಸ್, ಮಾರ್ಕೆಟ್ ರೋಡ್, ಕಾರ್ಕಳ ಇವರಿಂದ ಪಡೆಯಬಹುದಾಗಿದೆ. ಅರ್ಜಿ ಫಾರಂಗಳನ್ನು ಪಡೆದು ಭರ್ತಿ ಮಾಡಿ ಜೂ. 8ರೊಳಗೆ ವಿಬಿಎಸ್ ಸಭಾ ಪೆರ್ವಾಜೆ ಕಾರ್ಕಳ ಇಲ್ಲಿಗೆ ಸಲ್ಲಿಸಬೇಕು ಎಂದು ಸಭಾದ ಪ್ರಕಟನೆ ತಿಳಿಸಿದೆ.































