ಕಾರ್ಕಳ : ಸ್ಕೂಟರ್ ಡಿಕ್ಕಿಯಾಗಿ ಪಾದಾಚಾರಿ ಮಹಿಳೆ ಗಾಯಗೊಂಡಿರುವ ಘಟನೆ ಮೇ 18ರಂದು ಶಿವಪುರದಲ್ಲಿ ಸಂಭವಿಸಿದೆ. ಲಕ್ಷ್ಮೀ (60 ವ) ಎಂಬವರು ಮೇ 18ರಂದು ರಾತ್ರಿ 11:30ಕ್ಕೆ ಬ್ಯಾಣ ಶ್ರೀ ಗದ್ದುಗೆ ಅಮ್ಮನವರ ದೇವಸ್ಥಾನದ ಹತ್ತಿರ ರಸ್ತೆ ದಾಟುವಾಗ ಮಧನ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್ ಡಿಕ್ಕಿಯಾಗಿದೆ. ಪರಿಣಾಮವಾಗಿ ಲಕ್ಷ್ಮೀ ಅವರ ತಲೆಯ ಹಿಂಭಾಗ, ಎಡಗೈ ಹಾಗೂ ಎಡಕಾಲಿಗೆ ತೀವ್ರ ತರಹದ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹೆಬ್ರಿ : ಪಾದಾಚಾರಿ ಮಹಿಳೆಗೆ ಸ್ಕೂಟರ್ ಡಿಕ್ಕಿ

































