ಮಾಧವ ಮುದ್ರಾಡಿ ಸ್ಮರಣಾರ್ಥ ಶೇ. 85 ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

ಹೆಬ್ರಿ : ಎಸ್ಸೆಸೆಲ್ಸಿ ಹಾಗೂ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ 85% ಕ್ಕಿಂತ ಅಧಿಕ ಅಂಕ ಗಳಿಸಿದ ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಗಣಪತಿ ಎಂ. ಮುದ್ರಾಡಿಯವರು ತಮ್ಮ ಪುತ್ರ ಮಾಧವ ಮುದ್ರಾಡಿ ಅವರ ಸ್ಮರಣಾರ್ಥ ಕಳೆದ 8 ವರ್ಷಗಳಿಂದ ಸನ್ಮಾನಿಸುತ್ತಾ ಬಂದಿದ್ದು, 2024-25 ಸಾಲಿನ ಸನ್ಮಾನ ಕಾರ್ಯಕ್ರಮ ಮೇ 18ರಂದು ಮುದ್ರಾಡಿಯ ಸಭಾಭವನದಲ್ಲಿ ನಡೆಯಿತು.

ಎಸ್ಸೆಸೆಲ್ಸಿಯ 11 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿ.ಯು.ಸಿ.ಯ 12 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಸಿ.ಎ. ರವಿರಾವ್ ಮುದ್ರಾಡಿ, ಪ್ರಸ್ತುತ ವೃತ್ತಿಪರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವವಿದೆ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸುವ ಉದ್ಯೋಗಕ್ಕೆ ಅನುಗುಣವಾದ ಶಿಕ್ಷಣದತ್ತ ಗಮನ ಹರಿಸಬೇಕು ಎಂದು ಹೇಳಿದರು.

ಗಣಪತಿ ಎಂ. ಮುದ್ರಾಡಿ ಮಾತನಾಡಿ, ಮಕ್ಕಳ ಸಾಧನೆಯಲ್ಲಿ ಹೆತ್ತವರ ಪಾತ್ರ ಮಹತ್ತರವಾದುದು. ಅವರ ವಿದ್ಯಾಭ್ಯಾಸಕ್ಕೆ ಬೆಂಬಲವಾಗಿ ನಿಂತು ಕಠಿಣ ಪರಿಶ್ರಮ ಪಡೆಯಲು ನಿರಂತರ ಪ್ರೋತ್ಸಾಹ ನೀಡಿದಲ್ಲಿ ಮಕ್ಕಳು ಉತ್ತಮ ಸಾಧನೆಯೊಂದಿಗೆ ಹೆತ್ತವರಿಗೆ, ಕಲಿತ ಶಾಲೆಗೆ ಮತ್ತು ಊರಿಗೆ ಕೀರ್ತಿ ತರಬಲ್ಲರು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಮುದ್ರಾಡಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಶೆಟ್ಟಿ ಉಪ್ಪಳ, ರಾಜೇಶ್, ಸುರೇಶ ಶೆಟ್ಟಿ, ಅಭಿಜ್ಞಾ ಶೆಟ್ಟ, ರಮೇಶ್ ಕುಮಾರ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

















































error: Content is protected !!
Scroll to Top