ಮಿಯ್ಯಾರು : ರಸ್ತೆಗೆ ವಾಲಿದ ವಿದ್ಯುತ್‌ ಕಂಬ – ಅಪಾಯಕಾರಿ ಸ್ಥಿತಿ

ಕಾರ್ಕಳ : ಕಾರ್ಕಳದಿಂದ ಬಜಗೋಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಿಯ್ಯಾರು ಶಿಲ್ಪಕಲಾ ಕೇಂದ್ರದ ಸಮೀಪ ವಿದ್ಯುತ್‌ ಕಂಬವೊಂದು ರಸ್ತೆಗೆ ವಾಲಿದೆ. ಯಾವುದೇ ಕ್ಷಣದಲ್ಲೂ ಕಂಬ ರಸ್ತೆಗೆ ಉರುಳುವ ಸಾಧ್ಯತೆಯಿದೆ. ಪ್ರತಿನಿತ್ಯ ಸಾವಿರಾರೂ ವಾಹನಗಳು, ಪಾದಾಚರಿಗಳು ಈ ರಸ್ತೆಯಲ್ಲಿ ಓಡಾಡುತ್ತಾರೆ. ಅಲ್ಲದೆ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಮಣ್ಣು ಮೃದುವಾಗಿ ಕಂಬ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲದೆ ಈ ಒಂದು ಕಂಬ ನೆಲಕ್ಕೆ ಬಿದ್ದಲ್ಲಿ ಉದ್ದಕ್ಕೆ ಇದಕ್ಕೆ ಹೊಂದಿಕೊಂಡಿರುವ ಕಂಬಗಳು ನೆಲಕ್ಕುರಳಿದೆ. ಆದ್ದರಿಂದ ತಕ್ಷಣವೇ ಮೆಸ್ಕಾಂ ಇಲಾಖೆ ಹಾಗೂ ಸಂಬಂಧ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ.

















































error: Content is protected !!
Scroll to Top