ಕಾರ್ಕಳ : 2024-25 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2ರ ಫಲಿತಾಂಶ ಪ್ರಕಟಗೊಂಡಿದ್ದು, ಸಾಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಆಕಾಶ್ ಇಂಗ್ಲಿಷ್ ಭಾಷಾ ವಿಷಯದಲ್ಲಿ 96 ಅಂಕಗಳನ್ನು ಗಳಿಸಿದ್ದಾನೆ. ಕನ್ನಡ-98, ಇಂಗ್ಲಿಷ್-96, ಬೌತಶಾಸ್ತ್ರ-98, ರಸಾಯನಶಾಸ್ತ್ರ-99, ಗಣಿತ -99 ಜೀವಶಾಸ್ತ್ರ-98 ಪಡೆಯುವುದರೊಂದಿಗೆ ಒಟ್ಟು 588 ಅಂಕಗಳೊಂದಿಗೆ ಶೇ. 98 ಫಲಿತಾಂಶ ತಮ್ಮದಾಗಿಸಿಕೊಂಡಿದ್ದಾರೆ.
ಸಾಧಕ ವಿದ್ಯಾರ್ಥಿಗೆ ಕಾಲೇಜು ಪ್ರಾಂಶುಪಾಲೆ ಸುಚೇತಾ ಕಾಮತ್, ಉಪನ್ಯಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯವರು ಅಭಿನಂದಿಸಿದ್ದಾರೆ.
ಪಿಯುಸಿ ವಾರ್ಷಿಕ ಪರೀಕ್ಷೆ-2 ಫಲಿತಾಂಶ : ಸಾಣೂರು ಪಿಯು ಕಾಲೇಜಿನ ಆಕಾಶ್ಗೆ ಶೇ. 98 ಫಲಿತಾಂಶ






























































