ಕಾರವಾರ : ಸರಕು ಸಾಗಾಣೆ ಹಡಗಿನಲ್ಲಿ ಕಾರವಾರ ಬಂದರಿಗೆ ಆಗಮಿಸಿದ ಪಾಕಿಸ್ತಾನಿ ಪ್ರಜೆಗೆ ಅಧಿಕಾರಿಗಳು ಪ್ರವೇಶ ನಿರಾಕರಿಸಿದ್ದು, ವಾಪಾಸ್ ಕಳುಹಿಸಿದ್ದಾರೆ. ಇರಾಕ್‌ನಿಂದ ಬಿಟುಮೆನ್ ಸಾಗಿಸುತ್ತಿದ್ದ ಎಂಟಿಆರ್ (MTR) ಓಶಿಯನ್ ಹಡಗಿನಲ್ಲಿ 14 ಭಾರತೀಯ ಸಿಬ್ಬಂದಿ, ಇಬ್ಬರು ಸಿರಿಯನ್ನರು ಮತ್ತು ಒಬ್ಬ ಪಾಕಿಸ್ತಾನಿ ಪ್ರಜೆಯಿದ್ದರು. ಮೇ 12 ರಂದು ಬಂದರಿಗೆ ಆಗಮಿಸಿದ ಈ ಹಡಗಿನಲ್ಲಿ ಆಗಮಿಸಿದ ಪಾಕ್ ಪ್ರಜೆಗಳನ್ನು ವಾಪಸ್ ಕಳುಹಿಸಲಾಯಿತು ಎಂದು ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ.
ಪಾಕಿಸ್ತಾನ ಮತ್ತು ಭಾರತ ನಡುವಿನ ಸಂಬಂಧ ಹದಗೆಟ್ಟಿರುವ ಕಾರಣ ಪಾಕಿಸ್ತಾನಿ ಮತ್ತು ಸಿರಿಯಾ ಪ್ರಜೆಗಳು ಹಡಗಿನಿಂದ ಇಳಿಯದಂತೆ ಪೊಲೀಸ್ ಇನ್ಸ್‌ಪೆಕ್ಟರ್ ನಿಶ್ಚಲ್ ಕುಮಾರ್ ಸೂಚನೆ ನೀಡಿದ್ದರು. ಅದರಂತೆ ಪೊಲೀಸರು ಕಾರ್ಯಾಚರಿಸಿ ಅವರ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ನಂತರ ವಿಚಾರಣೆ ನಡೆಸಿ ವಾಪಾಸ್ ಕಳುಹಿಸಲಾಗಿದೆ.










