ಬೈಕ್‌ಗಳ ಡಿಕ್ಕಿ – ದಂಪತಿಗೆ ಗಾಯ

ಕಾರ್ಕಳ : ಬೈಕ್‌ಗಳ ನಡುವೆ ಡಿಕ್ಕಿಯಾಗಿ ದಂಪತಿ ಗಾಯಗೊಂಡಿರುವ ಘಟನೆ ಮೇ 8ರಂದು ಮರ್ಣೆ ಗ್ರಾಮದಲ್ಲಿ ಸಂಭವಿಸಿದೆ. ಹೆರ್ಮುಂಡೆ ಗ್ರಾಮದ ಜಾನ್‌ ಡಿಸೋಜಾ ಹಾಗೂ ಅವರ ಪತ್ನಿ ಅಂಜೆಲಿನ್‌ ಗ್ಲ್ಯಾಡಿಸ್‌ ಗುರುವಾರ ರಾತ್ರಿ ಅಜೆಕಾರಿನಲ್ಲಿ ಮೆಹೆಂದಿ ಕಾರ್ಯಕ್ರಮಕ್ಕೆ ಹೋಗಿ ಬೈಕ್‌ನಲ್ಲಿ ಹಿಂದಿರುಗುವಾಗ ಮರ್ಣೆ ಗ್ರಾಮದ ಬೊಂಡು ಕುಮೇರಿ ಶಾಲೆಯ ಹತ್ತಿರ ಅಂಡಾರು ಕಡೆಯಿಂದ ಅಜೆಕಾರು ಕಡೆಗೆ ಬರುತ್ತಿದ್ದ ಬೈಕ್‌ ಡಿಕ್ಕಿಯಾಗಿದೆ. ಪರಿಣಾಮವಾಗಿ ಜಾನ್‌ ಡಿಸೋಜಾ ಹಾಗೂ ಅಂಜೆಲಿನ್‌ ಗ್ಲ್ಯಾಡಿಸ್‌ ಇಬ್ಬರೂ ಗಾಯಗೊಂಡಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top