ಜೆ.ಇ.ಇ ಮೈನ್ ಫಲಿತಾಂಶ – ಕ್ರಿಯೇಟಿವ್‌ನ 6 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ : ರಾಷ್ಟ್ರ ಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸುವ ಜೆ.ಇ.ಇ ಮೈನ್ ಪರೀಕ್ಷೆಯ 2ನೇ ಫೇಸ್‌ನ ಅಂತಿಮ ಫಲಿತಾಂಶದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 6 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದು, 202 ವಿದ್ಯಾರ್ಥಿಗಳು ತೇರ್ಗಡೆ ಪಡೆಯುವ ಮೂಲಕ ಮುಂಬರುವ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಾದ ಚೇತನ್ ಗೌಡ ಎನ್. ಎಸ್. 99.7656463 ಪರ್ಸೆಂಟೈಲ್, ಸಾನಿಕ ಕೆ. ಎನ್. 99.5385594 ಪರ್ಸೆಂಟೈಲ್, ಮೋಹಿತ್ ಎಂ. 99.4982099 ಪರ್ಸೆಂಟೈಲ್, ಸುಮಂತ ಗೌಡ ಎಸ್. ಡಿ. 99.1307112 ಪರ್ಸೆಂಟೈಲ್, ಎಚ್. ಎ. ರಾಜೇಶ್ 99.1055485 ಪರ್ಸೆಂಟೈಲ್, ಎಂ. ಮಂಜುನಾಥ್ 99.0174525 ಪರ್ಸೆಂಟೈಲ್ ಪಡೆದುಕೊಂಡಿದ್ದಾರೆ.

ಎಚ್. ಎ. ರಾಜೇಶ್ ಭೌತಶಾಸ್ತ್ರದಲ್ಲಿ 100 ಪರ್ಸೆಂಟೈಲ್ ಗಳಿಸುವ ಜೊತೆಗೆ ಸುಮಾರು 30 ವಿದ್ಯಾರ್ಥಿಗಳು ವಿಷಯವಾರು 99 ಪರ್ಸೆಂಟೈಲ್‌ಗಿಂತ
ಅಧಿಕ ಅಂಕ ಗಳಿಸಿರುತ್ತಾರೆ. 99 ಪರ್ಸೆಂಟೈಲಿಗಿಂತ ಅಧಿಕ 6 ವಿದ್ಯಾರ್ಥಿಗಳು, 98ಕ್ಕಿಂತ ಅಧಿಕ 16, 95ಕ್ಕಿಂತ ಅಧಿಕ 54, 90 ಪರ್ಸೆಂಟೈಲ್‌ಗಿಂತ ಮೇಲ್ಪಟ್ಟು 120
ವಿದ್ಯಾರ್ಥಿಗಳು ಪರ್ಸೆಂಟೈಲ್‌ ಪಡೆದುಕೊಂಡಿದ್ದಾರೆ.
ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಜೆಇಇ (ಮೈನ್) ಪರೀಕ್ಷೆಯ ಸಂಯೋಜಕರಾದ ನಂದೀಶ್ ಎಚ್. ಬಿ, ಆದಿತ್ಯ ವಟಿ ಕೆ. ಮತ್ತು ವಿನಯ ಕುಮಾರ್ ಅಭಿನಂದಿಸಿದ್ದಾರೆ.









































































































error: Content is protected !!
Scroll to Top