ಸರಕಾರಿ ಪದವಿಪೂರ್ವ ಪಳ್ಳಿ ಕಾಲೇಜಿಗೆ ಶೇ.100 ಫಲಿತಾಂಶ

ಕಾರ್ಕಳ : 2024-25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪಳ್ಳಿ ಶೇ.100% ಫಲಿತಾಂಶವನ್ನು ದಾಖಲಿಸಿದೆ. ಗ್ರಾಮೀಣ ಭಾಗದ ಬಡ ಹಿಂದುಳಿದ ವಿದ್ಯಾರ್ಥಿಗಳ ಜ್ಞಾನ ದೇಗುಲವಾದ ಪಳ್ಳಿ ಸರಕಾರಿ ಕಾಲೇಜಿನಿಂದ ಕಲಾ ವಿಭಾಗದ 4 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದ 11 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಯನ್ನು ಬರೆದಿದ್ದು, ಎಲ್ಲರೂ ಉತ್ತಮ ಅಂಕಗಳಿಂದ ಉತ್ತೀರ್ಣರಾಗಿರುತ್ತಾರೆ.

ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಚೈತ್ರ(89%), ನಿರೀಕ್ಷಾ(84%), ವಿದ್ಯಾ(83%) ಕಲಾವಿಭಾಗದ ನವ್ಯ ಎ. (83.5) ಉತ್ತಮ ಅಂಕಗಳನ್ನು ಗಳಿಸಿದ್ದಾರೆ. ರಾಜ್ಯದ 13 ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 100% ಫಲಿತಾಂಶ ಬಂದಿದ್ದು, ಅದರಲ್ಲಿ ಪಳ್ಳಿ ಕಾಲೇಜು ಸಹ ಒಂದಾಗಿರುತ್ತದೆ ಎಂಬುವುದು ಹೆಮ್ಮೆ. 2023-24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲೂ ಪಳ್ಳಿ ಕಾಲೇಜಿಗೆ ಶೇ.100 ಫಲಿತಾಂಶ ಬಂದಿತ್ತು. ವಿದ್ಯಾರ್ಥಿಗಳಾದ ರಚನಾ, ರಕ್ಷಾ, ಅನನ್ಯ, ಸೌಮ್ಯ ಮತ್ತು ಶ್ರೀಕಾಂತ್ ಉತ್ತಮ ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದರು.





























































































































error: Content is protected !!
Scroll to Top